ಐಪಿಎಲ್: ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಯುಎಇಗೆ ನಿರ್ಗಮನ

photo: twitter
ಚೆನ್ನೈ: ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಶುಕ್ರವಾರ ದುಬೈಗೆ ನಿರ್ಗಮಿಸಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ 14 ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿನ ಉಳಿದ ಪಂದ್ಯಗಳನ್ನು ಆಡಲು ತಯಾರಿ ನಡೆಸಲಿದೆ.
ಸಿಎಸ್ಕೆ ಧೋನಿಯ ಚಿತ್ರವನ್ನು ಹಂಚಿಕೊಂಡಿದ್ದು, ಇದರಲ್ಲಿ ಭಾರತ ತಂಡದ ಮಾಜಿ ನಾಯಕ ಸೂಟ್ಕೇಸ್ನೊಂದಿಗೆ ಯುಎಇಗೆ ತೆರಳಲು ಸಜ್ಜಾಗುತ್ತಿರುವುದು ಕಂಡುಬಂದಿದೆ.
ಆಗಸ್ಟ್ 15, 2020 ರಂದು ಅಂತರ್ ರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾದ ನಂತರ, ಧೋನಿ ಈಗ ಐಪಿಎಲ್ನಲ್ಲಿ ಮಾತ್ರ ಆಡುತ್ತಿದ್ದಾರೆ. ಯುಎಇ ನಲ್ಲಿ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಸೆಪ್ಟೆಂಬರ್ 19 ರಂದು ಪುನರಾರಂಭವಾಗಲಿದ್ದು, ಐಪಿಎಲ್ ನಲ್ಲಿ ಧೋನಿ ಮತ್ತೆ ಕಾರ್ಯಪ್ರವೃತ್ತರಾಗಲಿದ್ದಾರೆ.
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕೂಡ ಯುಎಇಗೆ ಹೊರಟಿದೆ.
ಲೀಗ್ ಹಂತದ ಅಂತಿಮ ಪಂದ್ಯ ಅಕ್ಟೋಬರ್ 8 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ದಿಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಲಿದೆ.
Next Story





