ವಿಖಾಯ ಕರ್ನಾಟಕ ಯುಎಇ ಸಮಿತಿಯ ವಾರ್ಷಿಕ ಕಾರ್ಯಕ್ರಮ

ಮಂಗಳೂರು : ವಿಖಾಯ ಕರ್ನಾಟಕ ಯುಎಇ ಸಮಿತಿಯ ಪ್ರಥಮ ವಾರ್ಷಿಕ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸಮಸ್ತ ಕೇರಳ ಇಸ್ಲಾಮಿಕ್ ಮತ ವಿದ್ಯಾಭ್ಯಾಸ ಬೋರ್ಡ್ ಪ್ರಧಾನ ಕಾರ್ಯದರ್ಶಿ ಎಂ ಟಿ ಅಬ್ದುಲ್ಲಾ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ಸಮಸ್ತ ಕೇರಳ ಜಮೀಯತುಲ್ ಉಲೆಮಾ ಕಾರ್ಯದರ್ಶಿ ಶೈಖುನಾ ಪಿ.ಪಿ ಉಮರ್ ಮುಸ್ಲಿಯಾರ್ ಕೊಯ್ಯೂಡ್ ದುವಾ ನೇತೃತ್ವ ವಹಿಸಿದ್ದರು. ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ಸಮಿತಿಯ ಅಧ್ಯಕ್ಷ ಸಯ್ಯದ್ ಅಸ್ಕರ್ ಅಲಿ ತಂಙಲ್ ಕೋಲ್ಪೆ ಅಧ್ಯಕ್ಷತೆ ವಹಿಸಿದ್ದರು. ವಿಖಾಯ ಕರ್ನಾಟಕ ಯುಎಇ ಸಮಿತಿಯ ಕೋರ್ಡಿನೇಟರ್ ಅಶ್ರಫ್ ಪರ್ಲಡ್ಕ ಸ್ವಾಗತಿಸಿದರು.
ಕುಟ್ಟನಾಡ್ ಮುಸ್ಲಿಂ ಜಮಾಅತ್ ಇಮಾಮ್ ಸಮೀರ್ ದಾರಿಮಿ ಕೊಲ್ಲಂ ಮಾತನಾಡಿದರು. ಎಸ್ಕೆಎಸ್ಸೆಸ್ಸೆಫ್ ವಿಖಾಯ ಕರ್ನಾಟಕ ಯುಎಇ ಸಮಿತಿಯ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಎಂ ಟಿ ಅಬ್ದುಲ್ಲಾ ಮುಸ್ಲಿಯಾರ್ ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ಸಮಿತಿಯ ಅಧ್ಯಕ್ಷರಾದ ಸಯ್ಯದ್ ಅಸ್ಕರ್ ಅಲಿ ತಂಙಳ್, ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಮೌಲವಿ ಕಲ್ಲೆಗ, ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕೇಂದ್ರ ಸಮಿತಿಯ ಅಧ್ಯಕ್ಷರಾದ ಮೊಯಿದೀನ್ ಕುಟ್ಟಿ ಹಾಜಿ ದಿಬ್ಬ, ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ಉಪಾಧ್ಯಕ್ಷರಾದ ಉದ್ಯಮಿ ಅಶ್ರಫ್ ಶಾ ಮಾಂತೂರು, ಸಮಸ್ತ ಕೇರಳ ಇಸ್ಲಾಮಿಕ್ ಮತ ವಿದ್ಯಾಭ್ಯಾಸ ಬೋರ್ಡ್ ಕೇಂದ್ರ ಸಮಿತಿಯ ಸದಸ್ಯರಾದ ರಶೀದ್ ಹಾಜಿ ಪರ್ಲಡ್ಕ, ಝಾಯೆದ್ ಫೌಂಡೇಶನ್ ಫೈನಾನ್ಸಿಯಲ್ ಕಂಟ್ರೋಲರ್ ಹಾಗೂ ಅನಿವಾಸಿ ಸಾಮಾಜಿಕ ನೇತಾರ ಅಬ್ದುಲ್ಲಾ ಮಾದುಮೂಲೆ, ಶಂಸುಲ್ ಉಲೆಮಾ ಅರೆಬಿಕ್ ಕಾಲೇಜು ತೋಡಾರು ಯುಎಇ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಖಾದರ್ ಬೈತಡ್ಕ, ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ಕೋಶಾಧಿಕಾರಿ ಅಬ್ದುಲ್ ಲತೀಫ್ ಕೌಡಿಚ್ಚಾರ್, ವಿಖಾಯ ಕರ್ನಾಟಕ ಯುಎಇ ಸಮಿತಿಯ ಅಧ್ಯಕ್ಷ ನವಾಝ್ ಬಿ ಸಿ ರೋಡ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಯೂಸುಫ್ ಈಶ್ವರಮಂಗಲ, ಉದ್ಯಮಿ ಮುಸ್ತಾಕ್ ಕದ್ರಿ, ಬಷೀರ್ ಬಂಟ್ವಾಳ್, ಉದ್ಯಮಿ ಯೂಸುಫ್ ಬೇರಿಕೆ, ಅಶ್ರಫ್ ನಖೀಲ್, ಅಶ್ರಫ್ ನಾಟೆಕಲ್, ಲತೀಫ್ ಹಾಜಿ ಮದರ್ ಇಂಡಿಯಾ, ಅಶ್ರಫ್ ಯಾಕೂತ್, ರವೂಫ್ ಹಾಜಿ ಕೈಕಂಬ, ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ಕಾರ್ಯಾಧ್ಯಕ್ಷ ರಫೀಕ್ ಆತೂರು, ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ಉಪಾಧ್ಯಕ್ಷರಾದ ಅಬ್ದುಲ್ ಸಲಾಂ ಬಪ್ಪಲಿಗೆ, ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ಉಪಾಧ್ಯಕ್ಷರು, ದಾರುನ್ನೂರು ಯುಎಇ ಸಮಿತಿಯ ಅಧ್ಯಕ್ಷರಾದ ಶಂಸುದ್ದೀನ್ ಸೂರಲ್ಪಾಡಿ, ಎಸ್ಕೆಎಸ್ಸೆಸ್ಸೆಫ್ ಸಹಚಾರಿ ಕರ್ನಾಟಕ ಯುಎಇ ಚಯರ್ ಮೇನ್, ನೂರುಲ್ ಹುದಾ ಯುಎಇ ಸಮಿತಿಯ ಅಧ್ಯಕ್ಷರಾದ ಶೆರೀಫ್ ಕಾವು, ಎಸ್ಕೆಎಸ್ಸೆಸ್ಸೆಫ್ ಸರ್ಗಲಯ ಕರ್ನಾಟಕ ಯುಎಇ ಚಯರ್ ಮೇನ್ ಬದ್ರುದ್ದೀನ್ ಹೆಂತಾರ್, ದಾರುಸ್ಸಲಾಂ ಬೆಳ್ತಂಗಡಿ ಯುಎಇ ಕಾರ್ಯಾಧ್ಯಕ್ಷರಾದ ರಝಾಕ್ ಸೋಂಪಾಡಿ, ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಅಬುಧಾಬಿ ಅಧ್ಯಕ್ಷರಾದ ಸಹೀರ್ ಹುದವಿ ಹಾಗೂ ಕರ್ನಾಟಕ ಇಸ್ಲಾಮಿಕ್ ಸೆಂಟರ್, ದಾರುನ್ನೂರು ಯುಎಇ ಸಮಿತಿ, ನೂರುಲ್ ಹುದಾ ಯುಎಇ ಸಮಿತಿ, ಶಂಸುಲ್ ಉಲೆಮಾ ಅರೆಬಿಕ್ ಕಾಲೇಜು ತೋಡಾರು ಯುಎಇ ಸಮಿತಿ, ದಾರುಸ್ಸಲಾಂ ಬೆಳ್ತಂಗಡಿ ಯುಎಇ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಟ್ರೆಂಡ್ ಕರ್ನಾಟಕ ಯುಎಇ ಸಮಿತಿಯ ಚಯರ್ ಮೇನ್ ನೂರ್ ಮುಹಮ್ಮದ್ ನೀರ್ಖಜೆ ಅವರು ಕಾರ್ಯಕ್ರಮ ನಿರೂಪಿಸಿದರು. ವಿಖಾಯ ಕರ್ನಾಟಕ ಯುಎಇ ಸಮಿತಿಯ ಸಂಚಾಲಕ ಅಬ್ದುಲ್ ಅಝೀಝ್ ಸೋಂಪಾಡಿ ವಂದಿಸಿದರು.









