ದ್ವಿತೀಯ ಟೆಸ್ಟ್: ಆ್ಯಂಡರ್ಸನ್ ಗೆ ಐದು ವಿಕೆಟ್; ಭಾರತ 364 ರನ್ ಗೆ ಆಲೌಟ್

ಲಾರ್ಡ್ಸ್: ಕನ್ನಡಿಗ ಕೆ.ಎಲ್. ರಾಹುಲ್ ಅವರ ಆಕರ್ಷಕ ಶತಕದ ಹೊರತಾಗಿಯೂ ಭಾರತ ತಂಡ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ 2ನೇ ದಿನದಾಟವಾದ ಶುಕ್ರವಾರ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ನೇತೃತ್ವದ ಬೌಲಿಂಗ್ ದಾಳಿಗೆ ತತ್ತರಿಸಿ 126.1 ಓವರ್ ಗಳಲ್ಲಿ 364 ರನ್ ಗಳಿಸಿ ಆಲೌಟಾಗಿದೆ.
ಔಟಾಗದೆ 127 ರನ್ ನಿಂದ ಬ್ಯಾಟಿಂಗ್ ಮುಂದುವರಿಸಿದ ರಾಹುಲ್ ನಿನ್ನೆಯ ಮೊತ್ತಕ್ಕೆ ಕೇವಲ 2 ರನ್ ಸೇರಿಸಿ ರಾಬಿನ್ಸನ್ ಗೆ ವಿಕೆಟ್ ಒಪ್ಪಿಸಿದರು. ಔಟಾಗುವ ಮೊದಲು 250 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 129 ರನ್ ಗಳಿಸಿದರು.
ಆಲ್ ರೌಂಡರ್ ರವೀಂದ್ರ ಜಡೇಜ (40) ಹಾಗೂ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ರಿಷಭ್ ಪಂತ್ 37 ರನ್ ಗಳಿಸಿದರು.
ಇಂಗ್ಲೆಂಡ್ ನ ಪರವಾಗಿ ಆ್ಯಂಡರ್ಸನ್ ಐದು ವಿಕೆಟ್ ಗೊಂಚಲು(5-62)ಪಡೆದು ಮತ್ತೊಮ್ಮೆ ಮಿಂಚಿದರು. ಟೆಸ್ಟ್ ಕ್ರಿಕೆಟ್ ನಲ್ಲಿ 32ನೇ ಬಾರಿ 5 ವಿಕೆಟ್ ಗೊಂಚಲು ಪಡೆದರು. ರಾಬಿನ್ಸನ್ (2-73) ಹಾಗೂ ಮಾರ್ಕ್ ವುಡ್(2-91)ತಲಾ ಎರಡು ವಿಕೆಟ್ ಪಡೆದರು.
Next Story