ಲಾರ್ಡ್ಸ್‌ನಲ್ಲಿ ಶತಕ ಸಿಡಿಸಿದ ಭಾರತದ 10ನೇ ಬ್ಯಾಟ್ಸ್ ಮನ್ ಕೆ.ಎಲ್.ರಾಹುಲ್

ಲಂಡನ್, ಆ.13: ಭಾರತದ ಆರಂಭಿಕ ಬ್ಯಾಟ್ಸ್ ಮನ್ ಕೆ.ಎಲ್. ರಾಹುಲ್ ಅವರು ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ 129 ರನ್ ಗಳಿಸಿ ಔಟಾದರು.
ಪ್ರತಿಷ್ಠಿತ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಶತಕ ಗಳಿಸಿದ ಭಾರತೀಯರ ಆಯ್ದ ಗುಂಪಿಗೆ ರಾಹುಲ್ ಸೇರ್ಡಡೆಯಾದರು. ಆಶ್ಚರ್ಯಕರ ವಿಚಾರವೆಂದರೆ ಪಟ್ಟಿಯಲ್ಲಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಹೆಸರಿಲ್ಲ.
ಹತ್ತು ಭಾರತೀಯ ಬ್ಯಾಟ್ಸ್‌ಮನ್‌ಗಳು ಲಾರ್ಡ್ಸ್‌ನಲ್ಲಿ 12 ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ. ದಿಲೀಪ್ ವೆಂಗ್‌ಸರ್ಕಾರ್ ಮೂರು ಬಾರಿ ಈ ಸಾಧನೆಯನ್ನು ಮಾಡಿದ್ದಾರೆ. ಪ್ರತಿಯೊಂದು ಶತಕವನ್ನು ಪ್ರತ್ಯೇಕ ಪ್ರವಾಸದಲ್ಲಿ ಸಿಡಿಸಿದ್ದರು.
ಲಾರ್ಡ್ಸ್‌ನಲ್ಲಿ ಟೆಸ್ಟ್ ಶತಕ ಗಳಿಸಿದ ಭಾರತದ ಬ್ಯಾಟ್ಸ್‌ಮನ್‌ಗಳು:
ವರ್ಷ ಆಟಗಾರ ಸ್ಕೋರ್
1952 ವಿನೂ ಮಂಕಡ್ 184
1979 ಗುಂಡಪ್ಪ ವಿಶ್ವನಾಥ್ 113
1979 ದಿಲೀಪ್ ವೆಂಗ್ ಸರ್ಕಾರ್ 103
1982 ದಿಲೀಪ್ ವೆಂಗ್ ಸರ್ಕಾರ್ 157
1986 ದಿಲೀಪ್ ವೆಂಗ್ ಸರ್ಕಾರ್ 126*
1990 ಮುಹಮ್ಮದ್ ಅಝರುದ್ದೀನ್ 121
1990 ರವಿಶಾಸ್ತ್ರಿ 100
1996 ಸೌರವ್ ಗಂಗುಲಿ 131
2002 ಅಜಿತ್ ಅಗರ್ಕರ್ 109*
2011 ರಾಹುಲ್ ದ್ರಾವಿಡ್ 103*
2014 ಅಜಿಂಕ್ಯ ರಹಾನೆ 103
2021 ಕೆ.ಎಲ್ ರಾಹುಲ್ 129
*ಅಜೇಯವನ್ನು ಸೂಚಿಸುತ್ತದೆ.