ಬೆಂಗಳೂರು: ಅಪ್ರಾಪ್ತ ಬಾಲಕರ ಬ್ಲ್ಯಾಕ್‍ಮೇಲ್‍ಗೆ ಹೆದರಿ ಯುವಕ ಆತ್ಮಹತ್ಯೆ

ಬೆಂಗಳೂರು, ಆ.13: ಅಪ್ರಾಪ್ತ ಬಾಲಕರ ಬ್ಲ್ಯಾಕ್‍ಮೇಲ್‍ಗೆ ಹೆದರಿದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತನನ್ನು ಅರಸೀಕೆರೆ ನಿವಾಸಿ ಸುಪ್ರಿತ್ ಎಂದು ಗುರುತಿಸಲಾಗಿದೆ. ಸುಪ್ರಿತ್ ತನ್ನ ಪ್ರೇಯಸಿ ಜೊತೆಗಿರುವ ವಿಡಿಯೋ ಮಾಡಿದ್ದ ಬಾಲಕರು ಪದೇ ಪದೇ ಎರಡು ಸಾವಿರ, ಮೂರು ಸಾವಿರದಂತೆ ಹಣ ಕೊಡುವಂತೆ ಬ್ಲ್ಯಾಕ್‍ಮೇಲ್ ಮಾಡಿದ್ದಾರೆ ಎನ್ನಲಾಗಿದೆ.
ಘಟನೆ ನಡೆದು ಮೂರು ತಿಂಗಳು ಕಳೆದರೂ ಆರೋಪಿಗಳು ನಿರಂತರವಾಗಿ ಬ್ಲ್ಯಾಕ್‍ಮೇಲ್‍ಮಾಡಿದ್ದು, ಇದರಿಂದ ಮನನೊಂದ ಸುಪ್ರಿತ್ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಮೊಕದ್ದಮೆ ದಾಖಲಿಸಿಕೊಂಡಿರುವ ಉಪ್ಪಾರಪೇಟೆ ಠಾಣಾ ಪೊಲೀಸರು ನಾಲ್ವರು ಅಪ್ರಾಪ್ತ ಬಾಲಕರನ್ನು ಬಂಧಿಸಿದ್ದಾರೆ.
Next Story





