ಬೆಂಗಳೂರು: ಶಾಸಕ ಸತೀಶ್‌ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣ; ಮೂವರು ಆರೋಪಿಗಳ ಬಂಧನ

ಬೆಂಗಳೂರು, ಆ.13: ಬಿಜೆಪಿ ಶಾಸಕ ಸತೀಶ್‌ರೆಡ್ಡಿಅವರಿಗೆ ಸೇರಿದ ಕಾರುಗಳಿಗೆ ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಗಾರ್ವೆಭಾವಿಪಾಳ್ಯದ ಶ್ರೀಧರ್, ಸಾಗರ್ ಮತ್ತು ನವೀನ್ ಬಂಧಿತ ಆರೋಪಿಗಳು ಎಂದು ನಗರ ಪೊಲೀಸ್ ಆಯುಕ್ತಕಮಲ್ ಪಂತ್ ಹೇಳಿದ್ದಾರೆ.
ಬಡವರು, ಶ್ರೀಮಂತರು ಎನ್ನುವಕಾರಣಕ್ಕೆ ಕೃತ್ಯವೆಸಗಿದ್ದಾರೆ. ದೊಡ್ಡದೊಡ್ಡ ಕಾರುಗಳಲ್ಲಿ ಸತೀಶ್‌ರೆಡ್ಡಿ ಓಡಾಡುತ್ತಿದ್ದರು. ದೊಡ್ಡವರಿಗೆ ಬುದ್ಧಿಕಲಿಸಬೇಕೆಂಬ ಉದ್ದೇಶದಿಂದ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
ಸತೀಶ್‌ರೆಡ್ಡಿ ಮನೆ ಆವರಣಕ್ಕೆ ನುಗ್ಗಿ ಎರಡು ಕಾರುಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.ತನಿಖೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
Next Story





