ಆಗಸ್ಟ್ 14 ಅನ್ನು ದೇಶ ವಿಭಜನೆಯ ಭಯಾನಕ ನೆನಪಿನ ದಿನವಾಗಿ ಆಚರಣೆ:ಪ್ರಧಾನಿ ಘೋಷಣೆ

ಹೊಸದಿಲ್ಲಿ: ವಿಭಜನೆಯ ನೋವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಒಂದು ದಿನ ಮುಂಚಿತವಾಗಿ ಆಗಸ್ಟ್ 14 ಅನ್ನು ವಿಭಜನೆಯ ಭಯಾನಕ ಸ್ಮರಣೆಯ ದಿನವನ್ನಾಗಿ ಆಚರಿಸಲಾಗುವುದು ಎಂದು ಘೋಷಿಸಿದರು.
ಪಾಕಿಸ್ತಾನ ಆಗಸ್ಟ್ 14 ಅನ್ನು ತನ್ನ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸುತ್ತದೆ.
"ವಿಭಜನೆಯ ನೋವುಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಲಕ್ಷಾಂತರ ನಮ್ಮ ಸಹೋದರಿಯರು ಹಾಗೂ ಸಹೋದರರು ಸ್ಥಳಾಂತರಗೊಂಡರು. ದ್ವೇಷ ಹಾಗೂ ಹಿಂಸಾಚಾರದಿಂದಾಗಿ ಅನೇಕ ಜನರು ಪ್ರಾಣ ಕಳೆದುಕೊಂಡರು. ನಮ್ಮ ಜನರ ಹೋರಾಟ ಹಾಗೂ ತ್ಯಾಗದ ನೆನಪಿಗಾಗಿ ಆಗಸ್ಟ್ 14 ಅನ್ನು ವಿಭಜನೆಯ ಭಯಾನಕ ನೆನಪಿನ ದಿನವಾಗಿ ಆಚರಿಸಲಾಗುತ್ತದೆ "ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಸಾಮಾಜಿಕ ಒಡಕುಗಳನ್ನು ದೂರವಿರಿಸಲು ಹಾಗೂ ಏಕತೆಯ ಮನೋಭಾವವನ್ನು ಬಲಪಡಿಸಲು ಈ ದಿನವು ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು.
Partition’s pains can never be forgotten. Millions of our sisters and brothers were displaced and many lost their lives due to mindless hate and violence. In memory of the struggles and sacrifices of our people, 14th August will be observed as Partition Horrors Remembrance Day.
— Narendra Modi (@narendramodi) August 14, 2021







