ರಾಜ್ಯದ 21 ಪೊಲೀಸರಿಗೆ ರಾಷ್ಟ್ರಪತಿ ಪದಕ

ಬೆಂಗಳೂರು, ಆ.14: ರಾಜ್ಯದ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳು ಸೇರಿ 21 ಪೊಲೀಸರಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪದಕ ಘೋಷಿಸಲಾಗಿದೆ.
ಕೇಂದ್ರ ಗೃಹ ಇಲಾಖೆ ಈ ಕುರಿತು ಅಧಿಕೃತ ಪ್ರಕಟನೆ ಹೊರಡಿಸಿದ್ದು, ಎಡಿಜಿಪಿ ಉಮೇಶ್ ಕುಮಾರ್, ಎಡಿಜಿಪಿ ಅರುಣ್ ಚಕ್ರವರ್ತಿ ಸೇರಿ 21 ಪೊಲೀಸರಿಗೆ ಇಲಾಖೆಯಲ್ಲಿನ ಅತ್ಯುತ್ತಮ ಸೇವೆಗೆ ಪದಕ ನೀಡಲಾಗುತ್ತಿದೆ.
ಅದೇ ರೀತಿ, 19 ಪೊಲೀಸ್ ಆಧಿಕಾರಿಗಳಿಗೆ ಅತ್ಯುನ್ನತ ಸೇವಾ ಪದಕ ಸಿಕ್ಕಿದೆ. ಪ್ರಮುಖವಾಗಿ ಕೆಎಸ್‍ಆರ್ಪಿ ಮೂರನೆ ಬೆಟಾಲಿಯನ್ ಕಮಾಂಡೆಂಟ್ ಎಂ.ವಿ. ರಾಮಕೃಷ್ಣ ಪ್ರಸಾದ್, ಮಲ್ಲೇಶ್ವರಂ ಉಪವಿಭಾಗ ಎಸಿಪಿ ವೆಂಕಟೇಶ್ ನಾಯ್ಡು, ಚಿಕ್ಕಪೇಟೆ ಉಪವಿಭಾಗದ ಎಸಿಪಿ ಪಿ.ರವಿ, ರಾಜ್ಯ ಗುಪ್ತಚರ ಇಲಾಖೆಯ ಡಿವೈಎಸ್ಪಿ ನವೀನ್ ಕುಲಕರ್ಣಿ, ತಲಘಟ್ಟಪುರ ಪೊಲೀಸ್ ಠಾಣೆಯ ಪೊಲೀಸ್ ಇನ್‍ಸ್ಪೆಕ್ಟರ್ ಸಿದ್ದರಾಜು.
ಬೆಂಗಳೂರು ನಗರದ ಎಸಿಬಿ ಇನ್‍ಸ್ಪೆಕ್ಟರ್ ಎಂ.ಜೆ ದಯಾನಂದ, ಕಲಬುರ್ಗಿ ಗ್ರಾಮಾಂತರ ವೃತ್ತದ ಸಿಪಿಐ ಶಂಕರಗೌಡ ಪಾಟೀಲ್, ಬೆಳಗಾವಿಯ ಕೆಎಸ್‍ಆರ್ಪಿ ತರಬೇತಿ ಶಾಲೆಯ ವಿಶೇಷ ಆರ್‍ಎಸ್ಸೈ ಎಸ್.ಬಿ.ಮಾಳಗಿ, ರಾಜ್ಯ ಗುಪ್ತವಾರ್ತೆ ವಿಭಾಗದ ಮಹಿಳಾ ಪಿಎಸ್ಸೈ ಎಸ್.ಇ.ಗೀತಾ, ಕೆಎಸ್‍ಆರ್ಪಿ 3ನೆ ಬೆಟಾಲಿಯನ್ ವಿಶೇಷ ಎಆರ್‍ಎಸ್ಸೈ ಬಿ.ಎಸ್.ಗೋವರ್ಧನರಾವ್.
ಮಂಗಳೂರು ನಗರದ ಸೈಬರ್ ಅಪರಾಧಗಳ ಠಾಣೆಯ ಎಎಸ್ಸೈ ಮೋಹನ್, ಬೆಂಗಳೂರಿನ ವೈರ್‍ಲೆಸ್ ವಿಭಾಗದ ಎಎಸ್ಸೈ ರಾಮನಾಯಕ್, ತುಮಕೂರಿನ ಜಯನಗರ ಪೊಲೀಸ್ ಠಾಣೆಯ ಹೆಡ್‍ಕಾನ್‍ಸ್ಟೇಬಲ್ ಮುಹಮ್ಮದ್ ಮುನಾವರ್ ಪಾಷಾ, ಬೆಂಗಳೂರಿನ ಕೆಎಸ್‍ಆರ್ಪಿ 4ನೇ ಬೆಟಾಲಿಯನ್ ವಿಶೇಷ ಆರ್‍ಎಚ್‍ಸಿ ಎಸ್.ಪಿ.ಕೆರುಟಗಿ, ಬಳ್ಳಾರಿ ಡಿಎಆರ್‍ನ ಎಎಚ್‍ಸಿ ಬಿ.ಎಸ್.ದಾದಾ ಅಮೀರ್.
ಯಲಹಂಕ ಎಪಿಟಿಎಎಸ್ ಎಎಚ್‍ಸಿ ವಿ.ಸೋಮಶೇಖರ್, ಚಿಕ್ಕಮಗಳೂರು ಕಂಪ್ಯೂಟರ್ ವಿಭಾಗದ ಸಿಎಸ್‍ಸಿ ಆರ್.ಕುಮಾರ್, ಬೆಂಗಳೂರು ಕೆಎಸ್‍ಆರ್ಪಿ 3ನೆ ಬೆಟಾಲಿಯನ್ ವಿಶೇಷ ಆರ್‍ಎಸ್‍ಸಿ ಸಯ್ಯದ್ ಅಬ್ದುಲ್ ಖಾದರ್, ಹುಬ್ಬಳ್ಳಿ ಧಾರವಾಡದ ಸಿಸಿಆರ್‍ಬಿಯ ಸಿಎಸ್‍ಸಿ ಗೋಪಾಲ ದೇವೇಂದ್ರಪ್ಪ ಕೊಟಬಾಗಿ ಅವರಿಗೆ ಪ್ರಶಸ್ತಿ ಸಂದಿವೆ.





