ಕಟಪಾಡಿಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ

ಉಡುಪಿ, ಆ.14: ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಹಾಗೂ ಲಯನ್ಸ್ ಕ್ಲಬ್‌ಗಳ ಸಹಯೋಗದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ, ಕಾಪು ತಾಲೂಕು ಕಟಪಾಡಿ ಗ್ರಾಪಂನಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಡಾ. ಪ್ರಜ್ಞಾ ಮೊಗಸಾಲೆ ಹಾಗೂ ಡಾ. ಶೈನಿ ಅವರು ಗರ್ಭಿಣಿ/ಬಾಣಂತಿಯರ ಆರೋಗ್ಯದ ಬಗ್ಗೆ ಮಾಹಿತಿಗಳನ್ನು ನೀಡಿದರು. 35 ಮಂದಿ ಗರ್ಭಿಣಿಯರಿಗೆ ನ್ಯೂಟ್ರಿಶನ್ ಕಿಟ್‌ನ್ನು ಲಯನ್ಸ್ ಕ್ಲಬ್ ಕಟಪಾಡಿ ವತಿಯಿಂದ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಪ್ರಜ್ಞಾ ಮೊಗಸಾಲೆ ಹಾಗೂ ಡಾ. ಶೈನಿ ಅವರು ಗರ್ಭಿಣಿ/ಬಾಣಂತಿಯರ ಆರೋಗ್ಯದ ಬಗ್ಗೆ ಮಾಹಿತಿಗಳನ್ನು ನೀಡಿದರು. 35 ಮಂದಿ ಗರ್ಭಿಣಿಯರಿಗೆ ನ್ಯೂಟ್ರಿಶನ್ ಕಿಟ್‌ನ್ನು ಲಯನ್ಸ್ ಕ್ಲಬ್ ಕಟಪಾಡಿ ವತಿಯಿಂದ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪೌಷ್ಠಿಕ ಆಹಾರದ ಮಾಹಿತಿ ಮತ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಯೂಟ್ಯೂಬ್ ಚಾನೆಲ್ ಮೂಲಕ ಎಲ್ಲಾ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ನೇರ ಪ್ರಸಾರ ಮಾಡಲಾಯಿತು ಎಂದು ಜಿಲ್ಲಾಪಂಚಾಯತ್ ಪ್ರಕಟಣೆ ತಿಳಿಸಿದೆ.







