ರಾಜ್ಯದಲ್ಲಿ ಶನಿವಾರ 1,632 ಕೋವಿಡ್ ಪ್ರಕರಣ ದೃಢ, 25 ಮಂದಿ ಸಾವು

ಸಾಂದರ್ಭಿಕ ಚಿತ್ರ
ಬೆಂಗಳೂರು, ಆ.14: ರಾಜ್ಯದಲ್ಲಿ ದಕ್ಷಿಣ ಕನ್ನಡ, ಬೆಂಗಳೂರು ನಗರ, ಉಡುಪಿ ಹಾಗೂ ಮೈಸೂರು ಜಿಲ್ಲೆಗಳನ್ನು ಹೊರತು ಪಡಿಸಿದರೆ ಉಳಿದ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಸಾಕಷ್ಟು ಇಳಿಕೆಯಾಗಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಇಂದು ಒಬ್ಬರು ಮಾತ್ರ ಕೋವಿಡ್ನಿಂದ ಮೃತಪಟ್ಟಿರುವುದು ಜನತೆಯಲ್ಲಿ ಆತಂಕವನ್ನು ದೂರ ಮಾಡಿದೆ.
ಶನಿವಾರ ರಾಜ್ಯಾದ್ಯಂತ 1,632 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 25 ಮಂದಿ ಸಾವನ್ನಪ್ಪಿದ್ದಾರೆ. 1,612 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಹಾಗೂ 22,698 ಸಕ್ರಿಯ ಪ್ರಕರಣಗಳಿದ್ದು, ಅವರೆಲ್ಲರೂ ಆಸ್ಪತ್ರೆ, ಕೋವಿಡ್ ಸೆಂಟರ್ ಹಾಗೂ ಹೋಂ ಕ್ವಾರಂಟೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
25 ಸಾವು: ರಾಜ್ಯದಲ್ಲಿ ಶನಿವಾರ 25 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಅದರಲ್ಲಿ ಬೆಂಗಳೂರು 1, ಚಾಮರಾಜನಗರ 1, ಚಿತ್ರದುರ್ಗ 3, ದಕ್ಷಿಣ ಕನ್ನಡ 7, ಧಾರವಾಡ 1, ಹಾಸನ 3, ಕೋಲಾರ 3, ಮಂಡ್ಯ 2, ಮೈಸೂರು 1, ಶಿವಮೊಗ್ಗ 1, ಉಡುಪಿ 1, ಉತ್ತರ ಕನ್ನಡದಲ್ಲಿ ಒಂದು ಸಾವಿನ ಪ್ರಕರಣ ವರದಿಯಾಗಿದೆ.
1,632 ಸೋಂಕಿತ ಪ್ರಕರಣ: ರಾಜ್ಯದಲ್ಲಿ 1632 ಸೋಂಕಿತ ಪ್ರಕರಣ ವರದಿಯಾಗಿದೆ. ಅದರಲ್ಲಿ ಬಾಗಲಕೋಟೆ 2, ಬಳ್ಳಾರಿ 2, ಬೆಳಗಾವಿ 41, ಬೆಂಗಳೂರು ಗ್ರಾಮಾಂತರ 14, ಬೆಂಗಳೂರು ನಗರ 377, ಚಾಮರಾಜನಗರ 17, ಚಿಕ್ಕಬಳ್ಳಾಪುರ 8, ಚಿಕ್ಕಮಗಳೂರು 53, ಚಿತ್ರದುರ್ಗ 22, ದಕ್ಷಿಣ ಕನ್ನಡ 411, ದಾವಣಗೆರೆ 5, ಧಾರವಾಡ 3, ಹಾಸನ 97, ಹಾವೇರಿ 1, ಕಲಬುರಗಿ 3, ಕೊಡಗು 77, ಕೋಲಾರ 18, ಕೊಪ್ಪಳ 3, ಮಂಡ್ಯ 39, ಮೈಸೂರು 112, ರಾಯಚೂರು 1, ರಾಮನಗರ 3, ಶಿವಮೊಗ್ಗ 60ತುಮಕೂರು 43, ಉಡುಪಿ 169, ಉತ್ತರ ಕನ್ನಡ 49, ವಿಜಯನಗರ 2 ಪ್ರಕರಣಗಳು ಕಂಡು ಬಂದಿದೆ.
ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ 377 ಮಂದಿಗೆ ಕೋವಿಡ್ ದೃಢಪಟ್ಟಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ನಗರದಲ್ಲಿ 15,934 ಮಂದಿ ಸಾವನ್ನಪ್ಪಿದ್ದಾರೆ. 8,200 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ಅವರೆಲ್ಲರೂ ಆಸ್ಪತ್ರೆ, ಕೋವಿಡ್ ಸೆಂಟರ್ ಹಾಗೂ ಹೋಂ ಕ್ವಾರಂಟೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.







