ಜಮ್ಮು-ಕಾಶ್ಮೀರ ಗಡಿ ನಿಯಂತ್ರಣ ರೇಖೆಯಲ್ಲಿ ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡ ಭಾರತ-ಪಾಕಿಸ್ತಾನ ಸೇನಾ ಸಿಬ್ಬಂದಿ

ಶ್ರೀನಗರ: ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಶನಿವಾರ ಪಾಕಿಸ್ತಾನ ಹಾಗೂ ಭಾರತೀಯ ಸೇನಾ ಸಿಬ್ಬಂದಿ ಜಮ್ಮು ಹಾಗೂ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು.
ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ತಂಗ್ ದರ್ ಸೆಕ್ಟರ್ ನಲ್ಲಿರುವ ಚಿಲೇಹಾನ ತಿತ್ವಾಲ್ ಕ್ರಾಸಿಂಗ್ ಪಾಯಿಂಟ್ ನಲ್ಲಿ ಭಾರತೀಯ ಸೇನಾ ಸಿಬ್ಬಂದಿ ಸಿಹಿ ತಿಂಡಿಗಳನ್ನು ಪಾಕಿಸ್ತಾನದ ಸೈನಿಕರಿಗೆ ನೀಡಿ ಶುಭ ಕೋರಿದರು.
ಭಾರತೀಯ ಸೇನೆಯು ಸಿಹಿಯನ್ನು ಉಡುಗೊರೆಯಾಗಿ ನೀಡಿತು. ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯಗಳನ್ನು ಕೋರಿ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಶಾಂತಿ ಕಾಪಾಡುವ ಇಚ್ಛೆಯನ್ನು ಪ್ರದರ್ಶಿಸಿತು ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದರು.
Next Story





