ಕರಾಳ ನೀತಿಗಳ ವಿರುದ್ಧ ಮತ್ತೊಂದು ಸ್ವಾತಂತ್ರ್ಯ ಹೋರಾಟ ಅಗತ್ಯ : ಹರ್ಷ ಕುಮಾರ್ ಕುಗ್ವೆ
ಪಾದಯಾತ್ರೆಯ ಸಭೆ

ಉಡುಪಿ, ಆ.14: ಜನವಿರೋಧಿ ಹಾಗೂ ಕರಾಳ ನೀತಿಗಳನ್ನು ಜಾರಿಗೆ ತರುವ ಮೂಲಕ ಇಂದು ಭಾರತ ಕಠಿಣ ಪರಿಸ್ಥಿತಿಯನ್ನು ಎದುರಿಸು ತ್ತಿದೆ. ಇದರ ವಿರುದ್ಧ ನಾವೆಲ್ಲ ಮತ್ತೊಂದು ಸ್ವಾತಂತ್ರ ಹೋರಾಟಕ್ಕೆ ನಡೆಸಿ ದೇಶದ ಸ್ವಾತಂತ್ರವನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಸಾಮಾಜಿಕ ಹೋರಾಟಗಾರ ಹರ್ಷಕುಮಾರ್ ಕುಗ್ವೆ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ದೇಶದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಶನಿವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಕ್ಲಾಕ್ ಟವರ್ ಎದುರು ನಡೆದ ಪಾದಯಾತ್ರೆಯ ಸಭೆಯನ್ನುದ್ದೇಶಿಸಿ ಅವರು ಮಾತಾಡುತಿದ್ದರು.
ದೇಶದಿಂದ ಬ್ರಿಟೀಷರನ್ನು ಓಡಿಸುವುದು ಮಾತ್ರ ಸ್ವಾತಂತ್ರ ಹೋರಾಟದ ಉದ್ದೇಶ ಆಗಿರಲಿಲ್ಲ. ಅದರೊಂದಿಗೆ ಸಮಾನತೆ, ಭಾತೃತ್ವ, ಸಮಾಜವಾದ, ಜಾತ್ಯತೀತತೆಯ ದೇಶ ಕಟ್ಟುವುದು ಸ್ವಾತಂತ್ರ ಹೋರಾಟಗಾರರ ಕನಸು ಆಗಿತ್ತು. ಸ್ವಾತಂತ್ರ ಹೋರಾಟದ ಜೊತೆಗೆ ಅಸ್ಪಶ್ಯತೆ ವಿರುದ್ಧ ಹೋರಾಟ ಕೂ ಆಗಿತ್ತು ಎಂದು ಅವರು ತಿಳಿಸಿದರು.
ಈ ದೇಶ ಎಲ್ಲ ಧರ್ಮದವರಿಗೂ ಸೇರಿದ್ದು ಎಂದು ನಮ್ಮ ಸ್ವಾತಂತ್ರ ಹೋರಾಟಗಾರರು ಸಾರಿದ್ದರು. ಗಾಂಧೀಜಿ ಸ್ವರಾಜ್ಯದ ಸಂದೇಶ ಸಾರಿ ದರೆ, ಇಂದಿನ ಸರಕಾರ ಗುಲಾಮಗಿರಿ ಯನ್ನು ಬೋಧಿಸುತ್ತಿದೆ. ಇಂದು ಗೋಡ್ಸೆ ವಾದಿಗಳ ಕೈಯಲ್ಲಿ ದೇಶ ನಲುಗುತಿ್ತದೆ ಎಂದು ಅವರು ಆರೋಪಿಸಿದರು.
ಇದಕ್ಕೂ ಮುನ್ನಾ ಕಾಂಗ್ರೆಸ್ ಭವನದಿಂದ ಆರಂಭಗೊಂಡ ಪಾದಯಾತ್ರೆಯು ಬ್ರಹ್ಮಗಿರಿ-ಆಸ್ಪತ್ರೆ ರಸ್ತೆ, ಜೋಡುಕಟ್ಟೆ- ಕೋರ್ಟ್ ರಸ್ತೆ ಕೆ.ಎಂ.ಮಾರ್ಗದ ಮೂಲಕ ಕ್ಲಾಕ್ ಟವರ್ ಎದುರು ಸಮಾಪಗೊಂಡಿತು. ಬಳಿಕ ಅಲ್ಲಿನ ಗಾಂಧಿ ಪ್ರತಿಮೆಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಮೃತ್ ಶೆಣೈ, ಭಾಸ್ಕರ ರಾವ್ ಕಿದಿಯೂರು, ಪ್ರಖ್ಯಾತ್ ಶೆಟ್ಟಿ, ಹರೀಶ್ ಕಿಣಿ, ರಮೇಶ್ ಕಾಂಚನ್, ಹಬೀಬ್ ಅಲಿ, ಉದ್ಯಾವರ ನಾಗೇಶ್ ಕುಮಾರ್, ಮಂಜುನಾಥ್ ಪೂಜಾರಿ, ಕೃಷ್ಣಮೂರ್ತಿ ಆಚಾರ್ಯ, ವರೋನಿಕಾ ಕರ್ನೆಲಿಯೋ, ಮುರಳಿ ಶೆಟ್ಟಿ, ಯು.ಶೇಖಬ್ಬ, ಬಿಪಿನ್ ಚಂದ್ರ ಮೊದಲಾದವರು ಉಪಸ್ಥಿತರಿದ್ದರು.
'ಸತ್ಯದ ಬದಲು ಸುಳ್ಳು ರಾರಾಜಿಸುತ್ತಿದೆ'
ಇಂದು ಸತ್ಯದ ಬದಲು ಸುಳ್ಳು ರಾರಾಜಿಸುತ್ತಿದೆ. ಸುಳ್ಳು ಅಧಿಕಾರದಲ್ಲಿ ಕುಳಿತಿದೆ. ಆದುದರಿಂದ ನಾವು ಎಲ್ಲರು ಸತ್ಯದ ಪರವಾಗಿ ನಿಲ್ಲಬೇಕಾಗಿದೆ. ಅಂದು ಸತ್ಯದ ಪರವಾಗಿ ನಿಂತವರೆಲ್ಲ ದೇಶಪ್ರೇಮಿ, ಸ್ವಾತಂತ್ರ ಹೋರಾಟ ರಾಗಿದ್ದರೆ ಇಂದು ಸತ್ಯದ ಪರವಾಗಿ ನಿಂತವರಿಗೆ ದೇಶ ದ್ರೋಹಿಗಳೆಂದು ಪಟ್ಟ ಕಟ್ಟಲಾಗುತ್ತಿದೆ. ಸ್ವಾತಂತ್ರದ ಹೋರಾಟದಲ್ಲಿ ನಯಾ ಪೈಸೆ ಕೆಲಸ ಮಾಡದವ ರಿಂದ, ಸ್ವಾತಂತ್ರ ಹೋರಾಟಕ್ಕೆ ದ್ರೋಹ ಬಗೆದವರಿಂದ ಹಾಗೂ ಗೋಡ್ಸೆ ವಾದಿಗಳಿಂದ ನಾವು ದೇಶದ್ರೋಹಿಗಳೆಂದು ಕರೆಸಿಕೊಳ್ಳಬೇಕಾಗಿರುವುದು ದುರಂತ ಎಂದು ಹರ್ಷ ಕುಮಾರ್ ಕುಗ್ವೆ ತಿಳಿಸಿದರು.







