ಅಕ್ರಮ ಗಾಂಜಾ ಸಾಗಾಟ: ಓರ್ವನ ಸೆರೆ
ಪಡುಬಿದ್ರಿ, ಆ.14: ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವನನ್ನು ಪಡುಬಿದ್ರೆ ಪೊಲೀಸರು ಆ.13ರಂದು ಮಧ್ಯಾಹ್ನ ವೇಳೆ ಪಡುಬಿದ್ರಿ - ಕಾರ್ಕಳ ರಾಜ್ಯ ಹೆದ್ದಾರಿಯ ಪಾದೆಬೆಟ್ಟು ಶ್ರೀಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗುವ ಸ್ವಾಗ ಗೋಪುರದ ಹತ್ತಿರ ಬಂಧಿಸಿದ್ದಾರೆ.
ನಿಟ್ಟೆ ಬೋರ್ಗಲ್ಗುಡ್ಡೆಯ ಅಬ್ದುಲ್ ರಹಿಮಾನ್ (49) ಬಂಧಿತ ಆರೋಪಿ. ಈತನಿಂದ 17,810 ರೂ. ಮೌಲ್ಯದ 356.190 ಗ್ರಾಂ ಗಾಂಜಾ, 2000ರೂ. ಮೌಲ್ಯದ ಬಿಳಿ ಪೌಡರ್, 2 ಲಕ್ಷ ರೂ ಮೌಲ್ಯದ ಕಾರು ಹಾಗೂ 5,000 ರೂ. ಮೌಲ್ಯದ ಮೊಬೈಲ್ ಫೋನ್ ಹಾಗೂ 720 ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





