ಗೋಳ್ತಮಜಲು: ವಡಗರ ಯೂತ್ ಕ್ಲಬ್ ವತಿಯಿಂದ 75ನೆ ಸ್ವಾತಂತ್ರ್ಯ ದಿನಾಚರಣೆ
![ಗೋಳ್ತಮಜಲು: ವಡಗರ ಯೂತ್ ಕ್ಲಬ್ ವತಿಯಿಂದ 75ನೆ ಸ್ವಾತಂತ್ರ್ಯ ದಿನಾಚರಣೆ ಗೋಳ್ತಮಜಲು: ವಡಗರ ಯೂತ್ ಕ್ಲಬ್ ವತಿಯಿಂದ 75ನೆ ಸ್ವಾತಂತ್ರ್ಯ ದಿನಾಚರಣೆ](https://www.varthabharati.in/sites/default/files/images/articles/2021/08/15/302701-1629020356.jpg)
ಬಂಟ್ವಾಳ: ಕಲ್ಲಡ್ಕದ ಗೋಳ್ತಮಜಲಿನ ವಡಗರ ಯೂತ್ ಕ್ಲಬ್ ವತಿಯಿಂದ 75ನೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಸ್ವಾತಂತ್ರ್ಯ ಮತ್ತು ಶಾಂತಿಯ ಸಂಕೇತವಾಗಿ ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು.
ತಾಲೂಕು ಪಂಚಾಯತ್ ಸದಸ್ಯ ಮಹಾಬಲ ಆಳ್ವ ಮತ್ತು ಮುಹಮ್ಮದ್ ಹಾಜಿ ಗೋಳ್ತಮಜಲು ಧ್ವಜಾರೋಹಣ ನೆರವೇರಿಸಿದರು. ಹನೀಫ್ ಹಾಜಿ ಗೋಳ್ತಮಜಲು ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಮುಹಮ್ಮದ್ ಹಾಜಿ ಗೋಳ್ತಮಜಲು ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಲಾಯಿತು.
ಈ ಸಂದರ್ಭ ವಡಗರ ಯೂತ್ ಕ್ಲಬ್ ಅಧ್ಯಕ್ಷ ಸವೂದ್ ವಿ.ಕೆ., ಉಪಾಧ್ಯಕ್ಷ ಸೀಕೋ ಬೀಡೀಸ್ ಮಾಲಕ ಆಸಿಫ್ ಸೇರಿ ವಡಗರ ಯೂತ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.