ಕೊಕ್ಕಡ ಬದ್ರಿಯಾ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ
![ಕೊಕ್ಕಡ ಬದ್ರಿಯಾ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕೊಕ್ಕಡ ಬದ್ರಿಯಾ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ](https://www.varthabharati.in/sites/default/files/images/articles/2021/08/15/302714-1629026745.jpeg)
ವಿಟ್ಲ : ಕೊಕ್ಕಡ ಬದ್ರಿಯಾ ಜುಮಾ ಮಸೀದಿಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಜಮಾಆತ್ ಅಧ್ಯಕ್ಷ ಮುಸ್ತಾಫಾ ಮಲ್ಲಿಗೆಮಜಲು ಧ್ವಜಾರೋಹಣಗೈದರು. ಸ್ಥಳೀಯ ಖತೀಬ್ ಇಬ್ರಾಹಿಂ ದಾರಿಮಿ ದುಆ ನೆರವೇರಿಸಿ ಉದ್ಘಾಟಿಸಿದರು.
ಸ್ವಾತಂತ್ರ್ಯದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು ವೇದಿಕೆಯಲ್ಲಿ ಜಮಾಆತ್ ಕಾರ್ಯದರ್ಶಿ ರಶೀದ್ ಎಂ.ಎ.ಆರ್, ಯಂಗ್ ಮೆನ್ಸ್ ಅಧ್ಯಕ್ಷ ಮಹಮ್ಮದ್ ಅಲೀ ಮೊದಲಾದವರು ಉಪಸ್ಥಿತರಿದ್ದರು.
ಕುವ್ವತುಲ್ ಇಸ್ಲಾಮ್ ಮದ್ರಸ ಮುಖ್ಯ ಶಿಕ್ಷಕ ಜುನೈದ್ ಉಸ್ತಾದ್ ಸ್ವಾಗತಿಸಿ, ಶಿಕ್ಷಕ ಆದಂ ಉಸ್ತಾದ್ ವಂದಿಸಿದರು.
![](https://www.varthabharati.in/sites/default/files/images/galllery/2021/08/15/WhatsApp Image 2021-08-15 at 4.17.05 PM.jpeg)
Next Story