ಕೋವಿಡ್ ಪ್ರಕರಣಗಳನ್ನು ಗಮನಿಸಿ ಮೈಸೂರು ದಸರಾ ಆಚರಣೆ ಕುರಿತು ಕ್ರಮ: ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು,ಆ.15: ಕೋವಿಡ್ ಅಲೆಯ ಏರಿಳಿತ ಗಮನಿಸಿ ಸರಳ-ಸುರಕ್ಷಿತ ದಸರಾ ಆಚರಣೆಯ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ಮೂರನೇ ಅಲೆ, ಆಗಸ್ಟ್ 15 ಮುಗಿದ ಮೇಲೆ ಹೈಪರ್ ಕಮಿಟಿ ಮಾಡೋಣ ಅಂತ ಹೇಳಿದ್ದಾರೆ. ಕಳೆದ ವರ್ಷ ಸರಳವಾಗಿ ಆಚರಣೆ ಮಾಡಿದ್ದೇವೋ ಅದೇ ರೀತಿ ಈ ಬಾರಿಯೂ ಸರಳವಾಗಿ ಆಚರಣೆ ಮಾಡಬಹುದು ಎಂದು ಅವರ ಗಮನಕ್ಕೆ ತಂದಿದ್ದೇವೆ.
ಬಾವಲಿ ಚೆಕ್ ಪೊಸ್ಟ್ ನಲ್ಲಿ ಅಧಿಕಾರಿಗೆ ಹಣ ಕೊಟ್ಟು ಬರುತ್ತಿದ್ದಾರೆ. ದೂರು ಕೂಡ ದಾಖಲಾಗಿದೆ ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿ ಅಧಿಕಾರಿ ಬಿಟ್ಟಲ್ಲಿ ಕೂಡಲೇ ಅಮಾನತು ಮಾಡಲಾಗುವುದು. ರಿಪೋರ್ಟ್ ನೆಗೆಟಿವ್ ಇದ್ದವರಿಗೆ ಮಾತ್ರ ಅನುಮತಿ ನೀಡಿ, ನೆಗೆಟಿವ್ ವರದಿ ಇಲ್ಲದ ಯಾವುದೇ ವಾಹನಗಳಿಗೆ ಅನುಮತಿ ನೀಡಬಾರದು. ಒಂದೇ ಒಂದು ನಿದರ್ಶನ ಬಂದರೂ ಕೂಡ ಅವರನ್ನು ಅಮಾನತು ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಪೂರ್ಣಾವಧಿ ಮುಗಿಸುವುದರ ಬಗ್ಗೆ ಅನುಮಾನಗಳು ಬೇಡ. ಸಿಎಂ ಬದಲಾದಾಗ ಸಿದ್ದರಾಮಯ್ಯ ಬೇರೆ ಬೇರೆ ಪ್ಲಾನ್ ನಲ್ಲಿ ಇದ್ದರು. ಏನೇನೋ ಆಗಿ ಬಿಡುತ್ತದೆ ಎಂದು ಲೆಕ್ಕ ಹಾಕಿಕೊಂಡಿದ್ದರು. ಅವರ ಯಾವ ಪ್ಲಾನೂ ಯಶಸ್ವಿಯಾಗಲಿಲ್ಲ. ಹೀಗಾಗಿಯೇ ಸಿದ್ದರಾಮಯ್ಯ ಸುಮ್ಮನೆ ಸರ್ಕಾರ ಅಲ್ಪಾವಧಿಯ ಅಂತಾ ಹೇಳುತ್ತಿದ್ದಾರೆ.
ಶಾಸಕ ಎಸ್.ಎ.ರಾಮದಾಸ್ ಅವರ ಮಾರ್ಗದರ್ಶನದಲ್ಲಿ ಒಂದು ವರ್ಷ ಮೈಸೂರು ಉಸ್ತುವಾರಿ ಜವಾಬ್ದಾರಿ ಮುಗಿಸಿದ್ದೇನೆ. ಉಳಿದ ಅವಧಿಯಲ್ಲಿಯೂ ಅವರ ಮಾರ್ಗದರ್ಶನದಲ್ಲಿ ಮುಂದುವರೆಯುತ್ತೇನೆ. ನಮ್ಮಿಂದ ಎಂದೂ ಅವರಿಗೆ ತೊಂದರೆ ಆಗುವುದಿಲ್ಲ.
-ಎಸ್.ಟಿ.ಸೋಮಶೇಖರ್,
ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ.







