ಉಡುಪಿ ಮಲ್ಲಿಗೆಗೆ ಜಿಯೋಗ್ರಫಿಕಲ್ ಇಂಡಿಕೇಶನ್ (ಜಿಐ) ಮಾನ್ಯತೆ
ಉಡುಪಿ, ಆ.15: ಜಿಲ್ಲೆಯ ಶಂಕರಪುರ ಆಸುಪಾಸಿನಲ್ಲಿ ಬೆಳೆಯುವ ಉಡುಪಿಗೆ ವಿಶೇಷ ಗುರುತನ್ನು ನೀಡಿರುವ ವಿಶ್ವವಿಖ್ಯಾತ ಉಡುಪಿ ಮಲ್ಲಿಗೆಗೆ ‘ಜಿಯೋಗ್ರಫಿಕಲ್ ಇಂಡಿಕೇಷನ್’ (ಜಿಐ) ಸಿಕ್ಕಿದೆ.
ಈ ಹಿನ್ನೆಲೆಯಲ್ಲಿ ಆ.16ರ ಅಪರಾಹ್ನ 12 ಗಂಟೆಗೆ ಉಡುಪಿ ಸಂಚಾರಿ ಪೋಲಿಸ್ ಠಾಣೆ ಎದುರಲ್ಲಿ ಇರುವ ಪ್ರಥ್ವಿ ಕಾಂಪ್ಲೆಕ್ಸ್‌ನ ರತ್ನ ಕುಮಾರ್ ಕಚೇರಿಯಲ್ಲಿ ಮಲ್ಲಿಗೆ ಬೆಳೆಗಾರರ ಹಾಗೂ ಕೃಷಿಕರ ಸಭೆ ನಡೆಯಲಿದೆ.
ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್, ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು, ಸಂಘದ ಕೃಷಿ ಅಧಿಕಾರಿ ಮಟ್ಟಾರು ಜಾನ್ ಡಿ’ಸೋಜ, ಮಣಿಪಾಲ ಎಂಐಎಂನ ಪ್ರೊ.ಡಾ.ಹರೀಶ್ ಜೋಶಿ, ಸೋದೆ ವಾದಿರಾಜ ಟ್ರಸ್ಟ್ ಕಾರ್ಯದರ್ಶಿ ರತ್ನ ಕುಮಾರ್ ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





