ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಮಲ್ಪೆ, ಆ.15: ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಕೊಡವೂರು ಮೂಡಬೆಟ್ಟು ಪಲ್ಲಮಾರು ನಿವಾಸಿ ಕರಿಯ ಪೂಜಾರಿ ಎಂಬವರ ಮಗ ಮಿಥುನ್ (32) ಎಂಬವರು ಆ.14ರಂದು ಬೆಳಗ್ಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ: ಅನಾರೋಗ್ಯದಿಂದ ಬಳಲುತ್ತಿದ್ದ ಹೆರ್ಗಾ ಗ್ರಾಮದ ಸರಳಬೆಟ್ಟು ನಿವಾಸಿ ಪ್ರಭಾಕರ ಕೋಟ್ಯಾನ್ (60) ಎಂಬುವವರು ಆ.13ರ ಸಂಜೆಯಿಂದ ಆ.14ರ ಮಧ್ಯಾಹ್ನದ ಮಧ್ಯಾವದಿಯಲ್ಲಿ ಮನೆಯ ಸಮೀಪ ಪಾಳು ಬಿದ್ದ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





