ಸಿಂಘು ಗಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ: ಮಾಜಿ ಯೋಧರಿಂದ ಜಾಥಾ

photo : PTI
ಹೊಸದಿಲ್ಲಿ,ಆ.15: ಸಿಂಘು ಗಡಿಯಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನಾನಿರತ ರೈತರು ರವಿವಾರ 75ನೇ ಸ್ವಾತಂತ್ರ್ಯ ದಿನವನ್ನು ‘ಕಿಸಾನ ಮಝ್ದೂರ್ ಆಝಾದಿ ಸಂಗ್ರಾಮ ದಿವಸ್’ವನ್ನಾಗಿ ಆಚರಿಸಿದ್ದು,ಈ ಸಂದರ್ಭ ಮಾಜಿ ಯೋಧರು ಜಾಥಾ ನಡೆಸಿದರು.
ಹಿರಿಯ ರೈತ ನಾಯಕ ಸತ್ನಾಮ್ ಸಿಂಗ್ (85) ಅವರು ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಿದ್ದು,ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
‘ಕಿಸಾನ್ ಮಝ್ದೂರ್ ಆಝಾದಿ ಸಂಗ್ರಾಮ ದಿವಸ್’ ಅನ್ನು ದೇಶಾದ್ಯಂತ ಆಚರಿಸಲಾಗಿದೆ ಎಂದು ಜಮ್ಹೂರಿ ಕಿಸಾನ ಸಭಾದ ಪ್ರಧಾನ ಕಾರ್ಯದರ್ಶಿ ಕುಲ್ವಂತ್ ಸಿಂಗ್ ತಿಳಿಸಿದರು.
ಟಿಕ್ರಿ ಗಡಿಯಲ್ಲಿಯೂ ಪ್ರತಿಭಟನಾ ಸ್ಥಳದಲ್ಲಿ ರಾಷ್ಟ್ರಧ್ವಜಾರೋಹಣ ನಡೆದಿದ್ದು,ಗಾಝಿಪುರ ಗಡಿಯಲ್ಲಿ ಆಯೋಜಿಸಲಾಗಿದ್ದ ‘ತಿರಂಗಾ ಯಾತ್ರಾ’ದಲ್ಲಿ 500 ಬೈಕ್ಗಳು ಪಾಲ್ಗೊಂಡಿದ್ದವು.
Next Story





