ಯುವ ಮೋರ್ಚಾದಿಂದ ಯುವ ತಿರಂಗಾ ಯಾತ್ರ
ಕುಂದಾಪುರ, ಆ.15: 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಬಿಜೆಪಿ ಯುವಮೋರ್ಚಾ ಕುಂದಾಪುರ ಮಂಡಲ ವತಿ ಯಿಂದ ಯುವ ತಿರಂಗಾ ಯಾತ್ರ ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.
ಕುಂದಾಪುರ ಶಾಸ್ತ್ರೀ ಸರ್ಕಲ್ನಿಂದ ಹೊರಟ ಜಾಥ ಹೆದ್ದಾರಿ ಮಾರ್ಗವಾಗಿ ಕೋಟೇಶ್ವರ ಪೇಟೆಯ ಮೂಲಕ ತಿರುವು ಪಡೆದು ಕುಂದಾಪುರ ಪೇಟೆಯ ಸುತ್ತ ಸಾಗಿ ಶಾಸ್ತ್ರೀ ಸರ್ಕನಲ್ಲಿ ಸಾಮಾಪ್ತಿಗೊಂಡಿತು.
ಈ ಸಂದರ್ಭದಲ್ಲಿ ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ ಅಂಕದ ಕಟ್ಟೆ, ಕುಂದಾಪುರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಅವಿನಾಶ್ ಉಳ್ತೂರು, ಮಂಡಲ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಗೋಪಾಡಿ, ಸತೀಶ್ ಪೂಜಾರಿ ವಕ್ವಾಡಿ, ನಗರ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ರಾಜೇಶ್ ಕಡ್ಗಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚೇತನ್ ಬಂಗೇರಾ, ಪುರಸಭೆ ಸದಸ್ಯರಾದ ಸಂತೋಶ್, ಪ್ರಭಾಕರ್, ಶೇಖರ್ ಪೂಜಾರಿ, ರತ್ನಾಕರ್, ನಗರ ಪ್ರಾಧಿಕಾರ ಅಧ್ಯಕ್ಷ ವಿಜಯ್ ಎಸ್ ಪೂಜಾರಿ ಉಪಸ್ಥಿತರಿದ್ದರು.
Next Story





