ಬಿಜೆಪಿಗೆ ಇತಿಹಾಸ ಪುರುಷರಿಲ್ಲ, ಇರುವ ಪುರುಷರಿಗೆ ಇತಿಹಾಸವಿಲ್ಲ!: ಕಾಂಗ್ರೆಸ್ ಟೀಕೆ

ಬೆಂಗಳೂರು: ಬಿಜೆಪಿಗೆ ಇತಿಹಾಸ ಪುರುಷರಿಲ್ಲ, ಇರುವ ಪುರುಷರಿಗೆ ಇತಿಹಾಸವಿಲ್ಲ. ಸುಭಾಷ್ ಚಂದ್ರ ಬೋಸ್‌ರನ್ನ ಕಾಂಗ್ರೆಸ್ಸಿಗರು ಎನ್ನಲು ಸಾಕ್ಷಿ ಬೇಕಿಲ್ಲ, ಅವರು ಕಾಂಗ್ರೆಸ್ಸಿಗರಲ್ಲ ಎಂದು ತಿರುಚಲು ನಿಮ್ಮಿಂದ ಸಾದ್ಯವೂ ಇಲ್ಲ ಎಂದು ಬಿಜೆಪಿ ವಿರುದ್ಧ ಕಾಂಗ್ರಸ್ ವ್ಯಂಗ್ಯವಾಡಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರಸ್, ಬಿಜೆಪಿ ಪಕ್ಷ ದೇಶಕ್ಕೆ ಜೀವ ಕೊಟ್ಟ ನಿಮ್ಮವರ ಲೆಕ್ಕ ಹೇಳಿ ಹಾಗೆಯೇ ಬೋಸ್, ಸಾವರ್ಕರ್‌ನನ್ನು ದ್ವೇಷಿಸಿದ್ದೇಕೆ ಹೇಳಿ ಎಂದು ಪ್ರಶ್ನಿಸಿದೆ.
'ಸ್ವಾತಂತ್ರ್ಯದ ನಂತರ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ನೂರಾರು ಜಾತಿ, ಭಾಷೆಗಳು, ಹಲವು ಧರ್ಮ ಸಂಸ್ಕೃತಿಗಳಿದ್ದರೂ ಏಕತೆಯನ್ನ ಕಾಪಾಡಿಕೊಂಡು, ಪ್ರಜಾಪ್ರಭುತ್ವವನ್ನ ಉಳಿಸಿಕೊಂಡು ಬಂದಿದ್ದು ಕಾಂಗ್ರೆಸ್. ಆಗೇನಾದರು ಬಿಜೆಪಿ ಕೈಗೆ ಆಡಳಿತ ಸಿಕ್ಕಿದ್ದಿದ್ದರೆ ದೇಶದ ಸ್ಥಿತಿ ಅಫಘಾನಿಸ್ತಾನಕ್ಕಿಂತ ಬಿನ್ನವಿರುತ್ತಿರಲಿಲ್ಲ' ಎಂದು ಹೇಳಿದೆ .
ಸ್ವಾತಂತ್ರದ ನಂತರ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ನೂರಾರು ಜಾತಿ, ಭಾಷೆಗಳು, ಹಲವು ಧರ್ಮ ಸಂಸ್ಕೃತಿಗಳಿದ್ದರೂ ಏಕತೆಯನ್ನ ಕಾಪಾಡಿಕೊಂಡು, ಪ್ರಜಾಪ್ರಭುತ್ವವನ್ನ ಉಳಿಸಿಕೊಂಡು ಬಂದಿದ್ದು ಕಾಂಗ್ರೆಸ್.
— Karnataka Congress (@INCKarnataka) August 15, 2021
ಆಗೇನಾದರು ಬಿಜೆಪಿ ಕೈಗೆ ಆಡಳಿತ ಸಿಕ್ಕಿದ್ದಿದ್ದರೆ ದೇಶದ ಸ್ಥಿತಿ ಅಫಘಾನಿಸ್ತಾನಕ್ಕಿಂತ ಬಿನ್ನವಿರುತ್ತಿರಲಿಲ್ಲ!
ಬಿಜೆಪಿಗೆ ಇತಿಹಾಸ ಪುರುಷರಿಲ್ಲ, ಇರುವ ಪುರುಷರಿಗೆ ಇತಿಹಾಸವಿಲ್ಲ!
— Karnataka Congress (@INCKarnataka) August 15, 2021
ಸುಭಾಷ್ ಚಂದ್ರ ಬೋಸ್‌ರನ್ನ ಕಾಂಗ್ರೆಸ್ಸಿಗರು ಎನ್ನಲು ಸಾಕ್ಷಿ ಬೇಕಿಲ್ಲ, ಅವರು ಕಾಂಗ್ರೆಸ್ಸಿಗರಲ್ಲ ಎಂದು ತಿರುಚಲು ನಿಮ್ಮಿಂದ ಸಾದ್ಯವೂ ಇಲ್ಲ @BJP4Karnataka.
ದೇಶಕ್ಕೆ ಜೀವ ಕೊಟ್ಟ ನಿಮ್ಮವರ ಲೆಕ್ಕ ಹೇಳಿ ಹಾಗೆಯೇ ಬೋಸ್ ಸಾವರ್ಕರ್‌ನನ್ನು ದ್ವೇಷಿಸಿದ್ದೇಕೆ ಹೇಳಿ. pic.twitter.com/Xx5Qrc9eTk







