ಕಿನ್ಯ: ಬೆಳ್ತಪಳ್ಳಿ ಕೇಂದ್ರ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ
ಕಿನ್ಯ: ಬೆಳ್ತ ಪಳ್ಳಿ ಕೇಂದ್ರ ಜುಮಾ ಮಸ್ಜಿದ್ ಕಿನ್ಯ, ಅಲ್ ಮದ್ರಸತುಲ್ ಕುತುಬಿಯ ಕಿನ್ಯ ಹಾಗೂ ಕುತುಬಿಯ ಹಳೆ ವಿದ್ಯಾರ್ಥಿ ಕಮಿಟಿ ಇದರ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವವನ್ನು ಕುತುಬಿಯ ಹಳೇ ವಿದ್ಯಾರ್ಥಿ ಕಮಿಟಿಯ ನೇತೃತ್ವದಲ್ಲಿ ಕುತುಬಿಯ ಮದ್ರಸ ವಠಾರದಲ್ಲಿ ಆಚರಿಸಲಾಯಿತು.
ಧ್ವಜಾರೋಹಣ ಕಾರ್ಯಕ್ರಮವನ್ನು ಜಮಾಅತ್ ಅಧ್ಯಕ್ಷ ಕೆಸಿ ಇಸ್ಮಾಯಿಲ್ ಹಾಜಿ ನೆರವೇರಿಸಿದರು. ಸಯ್ಯದ್ ಅಮೀರ್ ತಂಙಳ್ ದುಹಾ ನೆರವೇರಿಸಿದರು. ಮುದರ್ರಿಸ್ ಅಬ್ದುಲ್ ಫತ್ತಾಹ್ ಫೈಝಿ, ಸದರ್ ಉಸ್ತಾದ್ ಫಾರೂಕ್ ದಾರಿಮಿ, ಕಾರ್ಯದರ್ಶಿ ಅಬ್ದುಲ್ ಖಾದರ್ ಹಾಜಿ, ಮದ್ರಸ ಮುಹಲ್ಲಿಮರು, ವಿದ್ಯಾರ್ಥಿಗಳು ಹಳೆ ವಿದ್ಯಾರ್ಥಿಗಳು, ಜಮಾಹತ್ ಕಮಿಟಿಯ ಹಾಲಿ ಹಾಗೂ ಮಾಜಿ ಸದಸ್ಯರು ಹಾಗೂ ಊರಿನ ಗಣ್ಯರು ಹಾಜರಿದ್ದರು.
Next Story