Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ16 Aug 2021 12:05 AM IST
share
ಓ ಮೆಣಸೇ...

ನೂತನ ಗುಜರಿ ನೀತಿ ಆಟೊಮೊಬೈಲ್ ವಲಯಕ್ಕೆ ಹೊಸ ಅನನ್ಯತೆ ನೀಡಲಿದೆ - ನರೇಂದ್ರ ಮೋದಿ, ಪ್ರಧಾನಿ
ಇಡೀ ವಲಯವನ್ನು ಗುಜರಿಗೆ ಹಾಕಲು ಈ ನೀತಿಯಿಂದ ಸುಲಭವಾಗಲಿದೆ.
 


ವಿಕೃತವಾದ ಮನಸ್ಸೇ ರಾವಣ- ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
ಹಾಗಾದರೆ, ರಾಮಭಕ್ತರ ವೇಷ ಧರಿಸಿ ವಿಕೃತಿ ಮೆರೆಯುತ್ತಿರುವವರು ರಾವಣರು ಅನ್ನುತ್ತಿದ್ದೀರಾ?


ಬಿಜೆಪಿ ಸರಕಾರ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ನಾನು ಸಚಿವನಾಗಿರುತ್ತೇನೆ - ಗೋವಿಂದ ಕಾರಜೋಳ, ಸಚಿವ
ಬಿಜೆಪಿ ಇಲ್ಲದಿದ್ದರೆ, ಕಾಂಗ್ರೆಸ್‌ನಲ್ಲಿ ಸಚಿವರಾಗಿರುತ್ತೀರಿ ಎಂದಾಯಿತು.


ಶ್ರೀರಾಮ ಸೇನೆಯು ರಾವಣನನ್ನು ವಧೆ ಮಾಡಿದಂತೆ ಕೊರೋನ ವೈರಾಣುವನ್ನು ಬಿಜೆಪಿ ಸೇನೆ ವಧೆ ಮಾಡಲಿದೆ-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಬಿಜೆಪಿ ಅಷ್ಟೊಂದು ಶಕ್ತಿಶಾಲಿ ವೈರಾಣುವೇ?


ಅಡ್ಜಸ್ಟ್‌ಮೆಂಟ್ ರಾಜಕಾರಣ ಮಾಡಲು ನನಗೆ ಗೊತ್ತಿಲ್ಲ - ಪ್ರೀತಂಗೌಡ, ಶಾಸಕ
ರಾಜಕಾರಣವೇ ಅಡ್ಜಸ್ಟ್‌ಮೆಂಟ್ ಆಗಿರುವಾಗ ಅದನ್ನು ಪ್ರತ್ಯೇಕವಾಗಿ ಕಲಿಯಬೇಕಾಗಿಲ್ಲ.


ಕಾಡೇ ಗೊತ್ತಿಲ್ಲದವರು ಅರಣ್ಯ ಸಚಿವರಾದರೆ ಹೇಗೆ? - ಅಪ್ಪಚ್ಚು ರಂಜನ್, ಶಾಸಕ
ಹಾಗಾದರೆ ಆ ಹುದ್ದೆಯನ್ನು ಕಾಡುಪ್ರಾಣಿಗಳಿಗೆ ಮೀಸಲಿಡಬೇಕೇ?


ಕಾಂಗ್ರೆಸ್‌ನದು ಹಿಟ್ ಆ್ಯಂಡ್ ರನ್ ಪಾಲಿಸಿ- ಡಿ.ವಿ.ಸದಾನಂದಗೌಡ, ಸಂಸದ
ನಿಮ್ಮದು ಸತ್ಯದ ವಿರುದ್ಧ ರನ್ ಆ್ಯಂಡ್‌ ರನ್ ಪಾಲಿಸಿ?


ಸೈರನ್ ಶಬ್ದ ಕೇಳಿ ಚರಂಡಿ ಹಾರಿ ಓಡುತ್ತಿದ್ದ ನಾನೇ ಇಂದು ಸೈರನ್‌ನೊಂದಿಗೆ ತೆರಳುವಂತಾಗಿದೆ - ಆರಗ ಜ್ಞಾನೇಂದ್ರ, ಗೃಹ ಸಚಿವ
ಎಮರ್ಜೆನ್ಸಿ ಚಿಕಿತ್ಸೆ ಬೇಕಾದವರ ಭಾಗ್ಯ ಅದು.


2023ರಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಸೂರ್ಯ ಚಂದ್ರರಷ್ಟೇ ಸತ್ಯ - ಕೋನರೆಡ್ಡಿ, ಜೆಡಿಎಸ್ ಮುಖಂ
ಇಂತಹ ಭಟ್ಟಂಗಿ ಹೇಳಿಕೆಗಳನ್ನು ಕುಮಾರಣ್ಣ ಕೂಡಾ ನಂಬುವುದಿಲ್ಲ, ಬಿಡಿ.


ಸಚಿವರ ಕಾರ್ಯನಿರ್ವಹಣೆಯನ್ನು ಪ್ರತಿ ತಿಂಗಳು ವೌಲ್ಯ ಮಾಪನಕ್ಕೆ ಒಳಪಡಿಸಲಾಗುವುದು - ನಳಿನ್ ಕುಮಾರ್ ಕಟೀಲು, ಸಂಸದ
ಆ ಬಳಿಕ ಯಾರಿಗೆ ಎಷ್ಟು ಪಾಲು ಎಂದು ನ್ಯಾಯೋಚಿತವಾಗಿ ನಿರ್ಧರಿಸಿ ಹಂಚಲಾಗುವುದೇ?


‘ಒಂದಕ್ಕೆ ಎರಡು ತೆಗೆದುಬಿಡಿ’ ಎನ್ನುವಷ್ಟರ ಮಟ್ಟಿಗೆ ಈಗ ಬಿಜೆಪಿ ಬೆಳೆದಿದೆ - ಕೆ.ಎಸ್.ಈಶ್ವರಪ್ಪ, ಸಚಿವ
ಅಷ್ಟು ಮಾತ್ರವೇ? ಬೆಲೆಗಳ ವಿಷಯದಲ್ಲಿ ಬಿಜೆಪಿ ಸರಕಾರ ಒಂದಕ್ಕೆ ಹತ್ತು ತೆಗೆಯಿರಿ ಎನ್ನುವಷ್ಟು ಬೆಳೆದಿದೆ.


ಇಂದಿರಾ ಕ್ಯಾಂಟೀನ್‌ಗೆ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಹೆಸರಿಟ್ಟರೆ ಏನು ತಪ್ಪು? - ಡಾ.ಸುಧಾಕರ್, ಸಚಿವ
ನಿಮಗೆ ಸ್ವಾಹಾಕರ್ ಎಂದು ಹೆಸರಿಟ್ಟರೆ ತಪ್ಪಾದೀತೇ?


ನರೇಂದ್ರ ಮೋದಿ ದೇಶದ ಮೊದಲ ಒಬಿಸಿ ಪ್ರಧಾನಿ - ಕೆ.ಲಕ್ಷಣ್, ರಾಜ್ಯಸಭಾ ಸದಸ್ಯ
ಹಾಗೆಲ್ಲ ಹೇಳಿ ಮುಂದೆಂದೂ ಜನತೆ ಒಬಿಸಿಯವರಿಗೆ ಪ್ರಧಾನಿ ಪಟ್ಟ ನೀಡದಂತೆ ಮಾಡುವಿರಾ?


ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಪ್ಪೆಗಳನ್ನು ತಕ್ಕಡಿಯಲ್ಲಿಟ್ಟು ತೂಗುವ ಸಂಕಟದಲ್ಲಿದ್ದಾರೆ - ದಿನೇಶ್ ಗುಂಡೂರಾವ್, ಕೆಪಿಸಿಸಿ ಮಾಜಿ ಅಧ್ಯಕ್ಷ
ನಿಮ್ಮ ತಕ್ಕಡಿಯಿಂದ ಹಾರಿದ ಹಲವು ಕಪ್ಪೆಗಳೂ ಅಲ್ಲಿ ಇವೆಯಲ್ಲಾ?


ರೈತರ ಅನುಪಯುಕ್ತ ಹಸುಗಳನ್ನು ಸರಕಾರ ಖರೀದಿಸಲಿ - ಎನ್.ಮಹೇಶ್, ಮಾಜಿ ಬಿಎಸ್‌ಪಿ ಶಾಸಕ
ಬಿಜೆಪಿ ನಿಮ್ಮನ್ನು ಖರೀದಿಸಿದ ಹಾಗೆಯೇ?


ಬಿಜೆಪಿಯವರು ಗೇಮ್ ಚೇಂಜರ್ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದು, ಈಗ ನೇಮ್ ಚೇಂಜರ್ ಆಗಿದ್ದಾರೆ - ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ ನಾಯಕ
ದೇಶದ ಹೆಸರೊಂದು ಬದಲಾಗುವುದು ಬಾಕಿ ಇದೆ.


ಆರೆಸ್ಸೆಸ್ ಎಂದಿಗೂ ಮೀಸಲಾತಿ ವಿರೋಧಿಯಲ್ಲ - ದತ್ತಾತ್ರೇಯ ಹೊಸಬಾಳೆ, ಆರೆಸ್ಸೆಸ್ ಪ್ರ.ಕಾರ್ಯದರ್ಶಿ
ಸಾಂಪ್ರದಾಯಿಕ ಬ್ರಾಹ್ಮಣ ಮೀಸಲಾತಿಯನ್ನು ರಕ್ಷಿಸುವುದೇ ಆರೆಸ್ಸೆಸ್‌ನ ಪರಮ ಧ್ಯೇಯ.


ನಾನು ಯಾವುದೇ ಅಧಿಕಾರ, ಅಂತಸ್ತಿಗೆ ಆಸೆ ಪಟ್ಟು ಬಿಜೆಪಿಗೆ ಬಂದವನಲ್ಲ - ಎಂ.ಟಿ.ಬಿ.ನಾಗರಾಜ್, ಸಚಿವ
ಪದವಿ ಸಿಕ್ಕ ಮೇಲೆ ಎಲ್ಲ ಪುಡಾರಿಗಳೂ ಮಹಾ ಸನ್ಯಾಸಿಗಳೇ.


ನನಗೆ ದೊರೆತ ಖಾತೆಯ ಬಗ್ಗೆ ಸಮಾಧಾನವೂ ಇಲ್ಲ, ಅಸಮಾಧಾನವೂ ಇಲ್ಲ - ಶ್ರೀರಾಮುಲು, ಸಚಿವ
ಖ್ಯಾತೆ ತೆಗೆಯುವ ಮೊದಲ ಹಂತದ ಹೇಳಿಕೆ.


ಜಮ್ಮು - ಕಾಶ್ಮೀರದಲ್ಲಿ ರಾಜ್ಯದ ಸ್ಥಾನಮಾನ ಪುನರ್ ಸ್ಥಾಪಿಸಬೇಕು - ರಾಹುಲ್‌ಗಾಂಧಿ, ಕಾಂಗ್ರೆಸ್ ಮುಖಂಡ
ಅಲ್ಲಿರುವ ಕಾಶ್ಮೀರಿಗಳಿಗೆ ಮನುಷ್ಯರ ಸ್ಥಾನಮಾನ ಕೊಡುವ ಬಗ್ಗೆಯೂ ಚರ್ಚೆಯಾಗಬೇಕು.


ಸಮಾಜಕಲ್ಯಾಣ ಇಲಾಖೆಯ ಭ್ರಷ್ಟಾಚಾರ ಶೂನ್ಯಮಟ್ಟಕ್ಕೆ ಇಳಿಸುವೆ - ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಇಲಾಖೆಯನ್ನೇ ಬರಖಾಸ್ತು ಮಾಡುವುದರಿಂದಷ್ಟೇ ಅದು ಸಾಧ್ಯ.


ಕಾಂಗ್ರೆಸ್ ಎಲ್ಲರ ಹಿತವನ್ನು ಬಯಸುವ ಪಕ್ಷ, ಬಿಜೆಪಿ ಬಿಸಿನೆಸ್ ಪಕ್ಷ - ಮಧು ಬಂಗಾರಪ್ಪ, ಮಾಜಿ ಶಾಸಕ
ಬಿಟ್ಟು ಬಂದ ಪಕ್ಷದ ಬಗ್ಗೆಯೂ ಏನಾದರೂ ಹೇಳಪ್ಪಾ.


ಬ್ಯಾಂಕುಗಳು ಮುಳುಗಿದರೆ ಗ್ರಾಹಕರಿಗೆ 5 ಲಕ್ಷ ರೂ. ಪರಿಹಾರ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
ನೀವು ಮುಳುಗಿಸಲು ಹೊರಟಿರುವ ಭಾರತವೆಂಬ ದೊಡ್ಡ ದೇಶದ ಪ್ರಜೆಗಳಿಗೂ ಅಂತಹ ಶುಭವಾರ್ತೆ ಏನಾದರೂ ಉಂಟೇ ?


ನನಗೆ ಬಿಪಿ, ಶುಗರ್ ಸಮಸ್ಯೆ ಇಲ್ಲ, ಆದರೆ ನನ್ನ ತಂಟೆಗೆ ಬಂದವರಿಗೆ ಅವೆಲ್ಲವೂ ಬರುತ್ತವೆ? - ಕೆ.ಎಸ್.ಈಶ್ವರಪ್ಪ, ಸಚಿವ
ನೀವು ಬಾಯಿತೆರೆದರೆ ಎದ್ದು ಕಾಣುವ ಮಹಾ ರೋಗಗಳ ಮುಂದೆ ಬಿಪಿ, ಶುಗರ್‌ಗಳಂತಹ ಜುಜುಬಿ ರೋಗಗಳೆಲ್ಲಾ ಯಾವ ಲೆಕ್ಕ?


ವಿವಾಹಿತ ಮಹಿಳೆಯತ್ತ ಪ್ರೇಮ ಚೀಟಿ (ಲವ್ ಲೆಟರ್) ಎಸೆಯುವುದು ಒಂದರ್ಥದಲ್ಲಿ ಮಾನಭಂಗಕ್ಕೆ ಸಮನಾಗುತ್ತದೆ - ಬಾಂಬೆ ಹೈ ಕೋರ್ಟ್‌ನ ನಾಗ್ಪುರ ಪೀಠ
ಈ ವಿಷಯದಲ್ಲಿ ವಿವಾಹಿತೆ ಮತ್ತು ಅವಿವಾಹಿತೆ ಎಂಬ ತಾರತಮ್ಯವೇಕೆ ಸಾರ್?


ಬೊಮ್ಮಾಯಿ ಸಂಪುಟದಲ್ಲಿ ಅದೇ ಹಳೇ ಸಚಿವರು ಹೊಸದಾಗಿ ಪ್ರಮಾಣವಚನ ಸ್ವೀಕರಿಸಿ ತಮ್ಮ ಹಳೇ ಚಾಳಿಯನ್ನು ಮುಂದುವರಿಸಿದ್ದಾರೆ - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಹೊಸ ಹೊಸ ಚಾಳಿಗಳನ್ನು ಬೆಳೆಸಿಕೊಳ್ಳುತ್ತಾ ಇರುವುದಕ್ಕೆ ಅದೇನು ನಿಮ್ಮ ಸಂಪುಟವೇ?


   ತುಳುನಾಡಿನ ಸಂಸ್ಕೃತಿ ಸಾರುವ ಚಲನಚಿತ್ರಗಳು ನಾಡಿನ ಜನರಿಗೆ ಸಂಸ್ಕಾರ, ಸಂಸ್ಕೃತಿಯ ಜ್ಞಾನವನ್ನು ಬೋಧಿಸುತ್ತವೆ. - ಎಸ್.ಅಂಗಾರ, ಸಚಿವ
ನಿಜ ಜೀವನದಲ್ಲಿ ಅದನ್ನೆಲ್ಲಾ ಹಾಳುಗೆಡವಿದವರು ಸಿನೆಮಾದಲ್ಲಾದರೂ ಅದನ್ನು ಅನುಮತಿಸಿದರೆ ಜನತೆಯ ಭಾಗ್ಯ ಎನ್ನಬಹುದು.


ಸಂಸತ್ ಸದಸ್ಯರ ದುಂಡಾವರ್ತನೆಯಿಂದ ಪ್ರಜಾಪ್ರಭುತ್ವದ ದೇಗುಲದ ಪಾವಿತ್ರ ಹಾಳಾಯಿತು - ವೆಂಕಯ್ಯನಾಯ್ಡು, ಉಪ ರಾಷ್ಟ್ರಪತಿ
ಹೊಸ ಸಂಸತ್ ನಿರ್ಮಾಣಕ್ಕೆ ಹೊಸ ಸಮರ್ಥನೆಯೇ?

share
ಪಿ.ಎ.ರೈ
ಪಿ.ಎ.ರೈ
Next Story
X