ದ್ವಿತೀಯ ಟೆಸ್ಟ್:ಮುಹಮ್ಮದ್ ಶಮಿ ಅರ್ಧಶತಕ, ಇಂಗ್ಲೆಂಡ್ ಗೆಲುವಿಗೆ 272 ರನ್ ಗುರಿ
ಭಾರತ 2ನೇ ಇನಿಂಗ್ಸ್ ನಲ್ಲಿ 298/8 ಡಿಕ್ಲೇರ್
photo: twitter
ಲಂಡನ್: ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ(ಔಟಾಗದೆ 56 ರನ್, 70 ಎಸೆತ, 6 ಬೌಂಡರಿ,1 ಸಿಕ್ಸರ್) ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ನ ಐದನೇ ಹಾಗೂ ಅಂತಿಮ ದಿನದಾಟದಲ್ಲಿ ಅರ್ಧಶತಕವನ್ನು ಸಿಡಿಸಿದ್ದಲ್ಲದೆ, ಸಹ ಆಟಗಾರ ಜಸ್ ಪ್ರೀತ್ ಬುಮ್ರಾ(34 ರನ್, 64 ಎಸೆತ, 3 ಬೌಂಡರಿ) ಅವರೊಂದಿಗೆ 9ನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 89 ರನ್ ಸೇರಿಸಿ ತಂಡದ ಮುನ್ನಡೆಯನ್ನು 250ರ ಗಡಿ ದಾಟಿಸಿದರು.
ಭಾರತವು 8 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದ್ದು, ಇಂಗ್ಲೆಂಡ್ ಗೆಲುವಿಗೆ 60 ಓವರ್ ಗಳಲ್ಲಿ 272 ರನ್ ಗುರಿ ನೀಡಿದೆ.
ಶಮಿ ಅವರು ಮೊಯಿನ್ ಅಲಿ ಬೌಲಿಂಗ್ ನಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿ ಟೆಸ್ಟ್ ಕ್ರಿಕೆಟ್ ನಲ್ಲಿ ಎರಡನೇ ಅರ್ಧಶತಕ ಪೂರೈಸಿ ಗಮನ ಸೆಳೆದರು.
ದಿನದಾಟದ ಆರಂಭದಲ್ಲಿ ರಿಷಭ್ ಪಂತ್ ಹಾಗೂ ಇಶಾಂತ್ ಶರ್ಮಾ ವಿಕೆಟನ್ನು ಪಡೆದಿರುವ ಇಂಗ್ಲೆಂಡ್ ವೇಗದ ಬೌಲರ್ ಒಲ್ಲಿ ರಾಬಿನ್ಸನ್ ಭಾರತಕ್ಕೆ ಆಘಾತ ನೀಡಿದರು.
Next Story