ಅಫ್ಘಾನ್ ಅಧ್ಯಕ್ಷರು ನಾಲ್ಕು ಕಾರು, ಒಂದು ಹೆಲಿಕಾಪ್ಟರ್ ನಲ್ಲಿ ಹಣ ತುಂಬಿಕೊಂಡು ಪರಾರಿಯಾಗಿದ್ದಾರೆ: ವರದಿ

photo: twitter
ಮಾಸ್ಕೋ: ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಅವರು ನಾಲ್ಕು ಕಾರುಗಳು ಹಾಗೂ ಒಂದು ಹೆಲಿಕಾಪ್ಟರ್ ನಲ್ಲಿ ಹಣ ತುಂಬಿಕೊಂಡು ದೇಶದಿಂದ ಪರಾರಿಯಾಗಿದ್ದಾರೆ ಹಾಗೂ ಹೆಲಿಕಾಪ್ಟರ್ ನಲ್ಲಿ ಸಾಗಿಸಲು ಸಾಧ್ಯವಾಗದ ಹಣವನ್ನು ಬಿಟ್ಟು ಹೋಗಿದ್ದಾರೆ ಎಂದು ಕಾಬೂಲ್ನಲ್ಲಿರುವ ರಷ್ಯಾದ ರಾಯಭಾರ ಕಚೇರಿ ಸೋಮವಾರ ಹೇಳಿದೆ ಎಂದು RIA ಸುದ್ದಿಸಂಸ್ಥೆ ವರದಿ ಮಾಡಿದೆ.
ಘನಿ, ಅವರು ಪ್ರಸ್ತುತ ಎಲ್ಲಿದ್ದಾರೆಂದು ತಿಳಿದುಬಂದಿಲ್ಲ. ತಾಲಿಬಾನ್ಗಳು ಕಾಬೂಲ್ಗೆ ವಾಸ್ತವಿಕವಾಗಿ ಪ್ರತಿರೋಧವಿಲ್ಲದೆ ಪ್ರವೇಶಿಸಿದ ಬಳಿಕ ಘನಿ ಅವರು ರವಿವಾರ ಅಫ್ಘಾನಿಸ್ತಾನವನ್ನು ತೊರೆದಿದ್ದರು. ಅವರು ರಕ್ತಪಾತವನ್ನು ತಪ್ಪಿಸಲು ಬಯಸಿದ್ದರು ಎಂದು ಹೇಳಿದೆ.
ಕಾಬೂಲ್ನಲ್ಲಿ ರಾಜತಾಂತ್ರಿಕ ಅಸ್ತಿತ್ವವನ್ನು ಉಳಿಸಿಕೊಳ್ಳುವುದಾಗಿ ರಷ್ಯಾವು ಹೇಳಿದೆ ಮತ್ತು ತಾಲಿಬಾನ್ಗಳನ್ನು ದೇಶದ ಆಡಳಿತಗಾರರನ್ನಾಗಿ ಗುರುತಿಸಲು ಯಾವುದೇ ಆತುರವಿಲ್ಲ ಹಾಗೂ ಅವರ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸುವುದಾಗಿ ಹೇಳಿದ್ದರೂ ಸಹ ಅವರೊಂದಿಗಿನ ಬಾಂಧವ್ಯವನ್ನು ವೃದ್ಧಿಸಿಕೊಳ್ಳುವ ಭರವಸೆ ಹೊಂದಿದೆ.