ಕೋಟೇಶ್ವರ ಬ್ಯಾರೀಸ್ ಗ್ರೀನ್ ಅವೆನ್ಯೂನಲ್ಲಿ ಸ್ವಾತಂತ್ರ್ಯೋತ್ಸವ

ಕುಂದಾಪುರ, ಆ.16: ಕೋಟೇಶ್ವರ ಬ್ಯಾರೀಸ್ ಗ್ರೀನ್ ಅವೆನ್ಯೂನಲ್ಲಿ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ನಿವೃತ್ತ ಏರ್ ಇಂಡಿಯಾದ ಉದ್ಯೋಗಿ ಸುಕುಮಾರ್ ಬಂಗೇರ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಸುಕುಮಾರ್ ಬಂಗೇರರನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಅಬ್ದುಲ್ ರಹ್ಮಾನ್ ಸನ್ಮಾನಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಮೊಯಿದೀನ್ ಮಾಸ್ಟರ್, ಮಸೀದಿಯ ಧರ್ಮಗುರುಗಳಾದ ಫಝೀಲತ್ತುಲ್ ಹುಸೇನ್ ಮತ್ತು ಉಮ್ಮರ್, ಗ್ರಾಪಂ ಸದಸ್ಯ ರಾಜಶೇಖರ ಶೆಟ್ಟಿ, ಹಿರಿಯರಾದ ರಂಗನಾಥ ವಿ.ಭಟ್, ಕುಚೇಲಯ್ಯ, ನಾರಾಯಣ ಶೆಟ್ಟಿ, ವೈದ್ಯರಾದ ಡಾ.ಆಸಿಫ್ ಮತ್ತು ಮಸೀದಿಯ ಅಧ್ಯಕ್ಷ ಆಸಿಫ್ ಉಪಸ್ಥಿತರಿದ್ದರು. ಹಾಜಿ.ಕೆ. ಮೊಹಿದ್ದೀನ್ ಬ್ಯಾರಿ ಸ್ಮಾರಕ ಪ್ರೌಢಶಾಲೆಯ ಸಹ ಶಿಕ್ಷಕ ಸಂತೋಷ್ ಕಾರ್ಯಕ್ರಮ ನಿರ್ವಹಿಸಿದರು.
Next Story





