ರಾಜ್ಯದಲ್ಲಿ ಮಾದಕ ವಸ್ತುಗಳನ್ನು ಮಟ್ಟ ಹಾಕಲು ಕ್ರಮ: ಗೃಹ ಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗ, ಆ.16: ಮಾದಕ ವಸ್ತುಗಳನ್ನು ಮಟ್ಟ ಹಾಕಬೇಕು ಅಂತ ಮೊದಲ ಸಭೆಯಿಂದಲೂ ಸಹ ಸೂಚನೆ ಕೊಟ್ಟಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಶಿವಮೊಗ್ಗ ಅಷ್ಟೇ ಅಲ್ಲ ಬೆಂಗಳೂರು ಮಂಗಳೂರು ಸೇರಿದಂತೆ ಎಲ್ಲಾ ಕಡೆಗಳಲ್ಲಿಯು ಇದೆ ಎಂದರು.
ಇತ್ತಿಚಿನ ದಿನಗಳಲ್ಲಿ ಹತ್ತಕ್ಕೂ ಹೆಚ್ಚು ಟನ್ ನಷ್ಟು ಮಾದಕ ವಸ್ತು ಅಫೀಂ ಎಲ್ಲವನ್ನು ಸೀಜ್ ಮಾಡಿದ್ದಾರೆ. ಪೊಲೀಸ್ ಇಲಾಖೆ, ಒಳ್ಳೆಯ ಕೆಲಸ ಮಾಡುತ್ತಿದೆ. ನಮ್ಮ ಸಮ್ಮುಖದಲ್ಲಿ ಮಾದಕ ವಸ್ತು ಸುಡುವ ಕಾರ್ಯ ಕೂಡ ಆಗಲಿದೆ. ಅಂತಹದನ್ನು ಬಿಟ್ಟಿದ್ದರೆ ಏನೇನೋ ಅನಾಹುತಗಳು ಆಗುತ್ತಿದ್ದವು ಎಂದರು.
ವಿದೇಶಿಯರಿಗೆ ಅವಧಿ ಮುಗಿದ ನಂತರ ಇರೋದಕ್ಕೆ ಅವಕಾಶವಿಲ್ಲ.ಅದನ್ನು ಲೀಸ್ಟ್ ಮಾಡುತ್ತಿದ್ದಾರೆ. ಅವರ ಮೇಲಿರುವ ಮೊಕದ್ದಮೆಯನ್ನು ನೋಡಿ ಅವರನ್ನು ತಳ್ಳುವ ಕೆಲಸ ಮಾಡೋದಕ್ಕೆ ಹೇಳಿದ್ದೀನಿ ಎಂದರು.
ಟ್ರಾಫಿಕ್ ವಿಚಾರವನ್ನು ಕೂಡ ಚರ್ಚೆ ಮಾಡಿದ್ದೀನಿ
ಸ್ಪಾಟ್ ಫೈನ್ ಹಾಕ್ತಾ ಇರೋವುದರಿಂದಲೇ, ಜನರಿಗೆ ಕಿರಿಕಿರಿ ಆಗ್ತಾ ಇದೆ ಎಂಬ ಮಾತಿದೆ. ಕೆಲವು ಕಾನೂನಿನ ತೊಡಕುಗಳಿವೆ ಅದರ ಬಗ್ಗೆ ಚರ್ಚೆ ಮಾಡ್ತಾ ಇದ್ದೇವೆ ಎಂದರು.
ನಾನು, ರಾಘವೇಂದ್ರ, ಈಶ್ವರಪ್ಪ, ಹಾಲಪ್ಪ ಎಲ್ಲರೂ ಸೇರಿ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಅರಣ್ಯ, ಬಗರ್ ಹುಕುಂ, ಎಲ್ಲಾ ಸಮಸ್ಯೆ ಗಳನ್ನು ಆಲಿಸಿದ್ದೀವಿ.ನಾಳೆಯೇ ಎಲ್ಲಾ ಸಮಸ್ಯೆ ಬಗೆಹರಿಯುವುದಿಲ್ಲ.ಎಲ್ಲಾ ಸಮಸ್ಯೆ ಗಳ ಬಗ್ಗೆ ಚರ್ಚೆ ಆಗಿದೆ. ಆದಷ್ಚು ಬೇಗ ಅದಕ್ಕೆಲ್ಲಾ ಮುಕ್ತಿ ಕೊಡ್ತೀನಿ ಎಂದು ಹೇಳಿದರು.







