Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನೂತನ ಸಚಿವ ಮುರುಗೇಶ್‌ ನಿರಾಣಿ ವಿರುದ್ಧದ...

ನೂತನ ಸಚಿವ ಮುರುಗೇಶ್‌ ನಿರಾಣಿ ವಿರುದ್ಧದ ಭ್ರಷ್ಟಾಚಾರ ಆರೋಪಗಳಿಗೆ ಮತ್ತೆ ಜೀವ: ʼದಿವೈರ್‌ʼ ನಿಂದ ವಿಸ್ತೃತ ವರದಿ

ವಾರ್ತಾಭಾರತಿವಾರ್ತಾಭಾರತಿ16 Aug 2021 9:03 PM IST
share
ನೂತನ ಸಚಿವ ಮುರುಗೇಶ್‌ ನಿರಾಣಿ ವಿರುದ್ಧದ ಭ್ರಷ್ಟಾಚಾರ ಆರೋಪಗಳಿಗೆ ಮತ್ತೆ ಜೀವ: ʼದಿವೈರ್‌ʼ ನಿಂದ ವಿಸ್ತೃತ ವರದಿ

ಬೆಂಗಳೂರು,ಆ.16: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿದ ಬಳಿಕ ಬಸವರಾಜ ಬೊಮ್ಮಾಯಿ ಅವರನ್ನು ಗದ್ದುಗೆಗೇರಿಸಿ ಕರ್ನಾಟಕದಲ್ಲಿ ಹೊಸ ಆರಂಭವನ್ನು ಬಿಜೆಪಿ ಬಯಸಿದೆ. ಆದರೆ ಈಗಾಗಲೇ ಬೊಮ್ಮಾಯಿ ಸಂಪುಟದ ಸಚಿವ ಮುರುಗೇಶ ನಿರಾಣಿ ಅವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳು ಮತ್ತೆ ಜೀವತಳೆದಿವೆ. ಈ ಬಗ್ಗೆ ಸುದ್ದಿಜಾಲತಾಣ The Wire ವಿವರವಾದ ವರದಿಯನ್ನು ಪ್ರಕಟಿಸಿದೆ.

ಭ್ರಷ್ಟಾಚಾರ, ಹಣಕಾಸಿನ ಅವ್ಯವಹಾರ ಮತ್ತು ಹಿತಾಸಕ್ತಿ ಸಂಘರ್ಷದ ಗಂಭೀರ ಆರೋಪಗಳು ನೂತನ ಕೈಗಾರಿಕಾ ಸಚಿವ ನಿರಾಣಿ ಅವರನ್ನು ಮತ್ತೆ ನಿದ್ದೆಗೆಡಿಸಿವೆ.
ಬೆಂಗಳೂರಿನ ಸ್ಥಳೀಯ ನ್ಯಾಯಾಲಯವೊಂದು ಕಳೆದ ಮಂಗಳವಾರ ನಿರಾಣಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧದ, ಬೆಂಗಳೂರಿನ ರಿಯಲ್ ಎಸ್ಟೇಟ್ ಕಂಪನಿ ಪಾಷ್ ಸ್ಪೇಸ್ ಇಂಟರ್ನ್ಯಾಷನಲ್ ಪ್ರೈ.ಲಿ.ನ ಸ್ಥಾಪಕ ಆಲಂ ಪಾಷಾ ಅವರ ಸಹಿಯನ್ನು ಫೋರ್ಜರಿ ಮಾಡಿದ್ದ ಮತ್ತು ನಿರ್ಮಾಣ ಯೋಜನೆಗಾಗಿ ಅವರಿಗೆ ಮಂಜೂರಾಗಿದ್ದ 26 ಎಕರೆ ಸರಕಾರಿ ನಿವೇಶನವನ್ನು ವಂಚಿಸಿದ್ದ ಆರೋಪಗಳ ಕುರಿತು ಭ್ರಷ್ಟಾಚಾರ ನಿಗ್ರಹ ಘಟಕ (ಎಸಿಬಿ)ದಿಂದ ಹೊಸದಾಗಿ ತನಿಖೆಗಾಗಿ ವಾದವಿವಾದಗಳನ್ನು ಆಲಿಸಿದೆ.

ಪ್ರತಿಕ್ರಿಯೆ ಕೋರಿ The Wire ನಿರಾಣಿ ಮತ್ತು ಇತರರಿಗೆ ಎಸ್ಎಂಎಸ್ ಗಳನ್ನು ಕಳುಹಿಸಿ ಸಂಪರ್ಕಿಸಲು ಪ್ರಯತ್ನಿಸಿತ್ತಾದರೂ ಅವರು ಅದಕ್ಕೆ ಸ್ಪಂದಿಸಿಲ್ಲ. ಪಾಷಾ ಅವರು 2011,ಎಪ್ರಿಲ್ನಲ್ಲಿ ನಿರಾಣಿ, ಯಡಿಯೂರಪ್ಪ, ಮಾಜಿ ಪ್ರಧಾನ ಕಾರ್ಯದರ್ಶಿ ವಿ.ಪಿ.ಬಳಿಗಾರ್ ಮತ್ತು ಕರ್ನಾಟಕ ಉದ್ಯೋಗ ಮಿತ್ರದ ಮಾಜಿ ಆಡಳಿತ ನಿರ್ದೇಶಕ ಶಿವಸ್ವಾಮಿ ಅವರ ವಿರುದ್ಧ ದೂರು ಸಲ್ಲಿಸಿದ್ದರು. ಈ ನಾಲ್ವರ ವಿರುದ್ಧ ಭ್ರಷ್ಟಾಚಾರ,ಫೋರ್ಜರಿ,ವಂಚನೆ ಮತ್ತು ಕ್ರಿಮಿನಲ್ ಒಳಸಂಚು ಆರೋಪಗಳನ್ನು ಹೊರಿಸಿದ್ದರು.

ದೂರಿನಲ್ಲಿ ತಿಳಿಸಿರುವಂತೆ 2010 ಜೂನ್ ನಲ್ಲಿ ಕರ್ನಾಟಕ ಸರಕಾರವು ಆಯೋಜಿಸಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಷಾ ಅವರ ಕಂಪನಿಯು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಗ್ಗದ ದರಗಳ ಮನೆಗಳ ನಿರ್ಮಾಣಕ್ಕಾಗಿ ರಾಜ್ಯ ಸರಕಾರದೊಂದಿಗೆ ಒಡಂಬಡಿಕೆಯೊಂದಕ್ಕೆ ಸಹಿ ಹಾಕಿತ್ತು. ಬಳಿಕ ರಾಜ್ಯ ಸರಕಾರದ ಉನ್ನತ ಮಟ್ಟದ ಪರವಾನಿಗೆ ಸಮಿತಿ(ಎಸ್ಎಚ್ಎಲ್ಸಿಸಿ)ಯು ಪಾಷಾರ ಯೋಜನೆಗಾಗಿ 26 ಎಕರೆ ಸ್ವಾಧೀನ ಪಡಿಸಿಕೊಂಡ ಭೂಮಿಯ ಹಂಚಿಕೆಗೆ ಅನುಮೋದನೆಯನ್ನು ನೀಡಿತ್ತು. 

The Wire ಪರಿಶೀಲಿಸಿರುವ ಸರಕಾರದ ದಾಖಲೆಗಳಂತೆ ಈ ಯೋಜನೆಯು 600 ಕೋ.ರೂ.ವೆಚ್ಚದ್ದಾಗಲಿತ್ತು ಮತ್ತು 500 ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿತ್ತು. ಆಗ ನಿರಾಣಿ ರಾಜ್ಯದ ಕೈಗಾರಿಕಾ ಸಚಿವರಾಗಿದ್ದರು. ಮಂಜೂರಾತಿಯ ಬಳಿಕ ಕಂಪನಿಯು ಯೋಜನೆಯನ್ನು ಅನುಷ್ಠಾನಿಸುವ ಉದ್ದೇಶದಿಂದ ಹಣಕಾಸು ಸಂಸ್ಥೆಗಳು, ವಾಸ್ತುಶಿಲ್ಪಿಗಳು ಮತ್ತು ಹಲವಾರು ಉದ್ದೇಶಿತ ಖರೀದಿದಾರರೊಂದಿಗೆ ಹಲವಾರು ವ್ಯವಹಾರಾತ್ಮಕ ಉದ್ಯಮ ಪಾಲುದಾರಿಕೆಗಳನ್ನು ಮಾಡಿಕೊಂಡಿತ್ತು.

ಏಳು ತಿಂಗಳುಗಳ ಬಳಿಕ ಪಾಷಾ ಬರೆದಿದ್ದರೆನ್ನಲಾದ ಪತ್ರವೊಂದು ಕರ್ನಾಟಕ ಉದ್ಯೋಗ ಮಿತ್ರಕ್ಕೆ ತಲುಪಿತ್ತು. ತಮಗೆ ಪ್ರಸ್ತಾವಿತ ಯೋಜನೆಯಲ್ಲಿ ಆಸಕ್ತಿಯಿಲ್ಲ ಎಂದು ಪತ್ರದಲ್ಲಿ ಘೋಷಿಸಲಾಗಿದ್ದು,ಭೂಮಿ ಹಂಚಿಕೆಯನ್ನು ರದ್ದುಗೊಳಿಸುವಂತೆ ಅಧಿಕಾರಿಗಳನ್ನು ಕೋರಲಾಗಿತ್ತು.

ಕರ್ನಾಟಕ ಉದ್ಯೋಗ ಮಿತ್ರವು ಫೆ.1ರಂದು ಈ ಪತ್ರವನ್ನು ಸ್ವೀಕರಿಸಿತ್ತಾದರೂ ಎಸ್ಎಚ್ಎಲ್ಸಿಸಿಯು ಜ.24ರಂದೇ ಪಾಷಾರ ಕಂಪನಿಗೆ ಭೂಮಿಯ ಹಂಚಿಕೆಯನ್ನು ರದ್ದುಗೊಳಿಸುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿತ್ತು. ಬಳಿಕ ಈ ನಿವೇಶನವನ್ನು ಡಿನೋಟಿಫೈ ಮಾಡಲಾಗಿತ್ತು ಮತ್ತು ಮಾರುಕಟ್ಟೆ ಬೆಲೆಗಳಲ್ಲಿ ಮಾರಾಟ ಮಾಡಲು ಖಾಸಗಿ ಮಾಲಿಕರಿಗೆ ಅವಕಾಶವನ್ನು ನೀಡಿತ್ತು. ಈ ವ್ಯವಹಾರ ದುಡ್ಡಿನ ಮಳೆಯನ್ನೇ ಸುರಿಸಿತ್ತು. ತನ್ನ ಸಹಿ ಮತ್ತು ಕಂಪನಿಯ ಲೆಟರ್ ಹೆಡ್ ಅನ್ನು ಫೋರ್ಜರಿ ಮಾಡಿ ಈ ಪತ್ರವನ್ನು ಸೃಷ್ಟಿಸಲಾಗಿತ್ತು ಎಂದು ಪಾಷಾ ದೂರಿನಲ್ಲಿ ಆರೋಪಿಸಿದ್ದರು.

ಪಾಷಾ ತನ್ನ ದೂರನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅದು ಈ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಸೂಚಿಸಿತ್ತು. ಆದರೆ 2016ರಲ್ಲಿ ಬೆಂಗಳೂರಿನ ಹೆಚ್ಚುವರಿ ನಗರ ಮತ್ತು ಸಿವಿಲ್ ನ್ಯಾಯಾಲಯವು ನಿರಾಣಿಯವರ ವಿರುದ್ಧ ಯಾವುದೇ ಸಾಕ್ಷಾಧಾರಗಳಿಲ್ಲ ಎಂಬ ಪೊಲೀಸ್ ಅಧೀಕ್ಷಕರ ವರದಿನ್ನು ಉಲ್ಲೇಖಿಸಿ ಲೋಕಾಯುಕ್ತದ ದೂರನ್ನು ರದ್ದುಗೊಳಿಸಿತ್ತು. ಆದರೆ ಆಗಿನ ಕುಣಿಕೆ ಈಗ ಬಿಗಿಯಾಗುತ್ತಿದೆ.

ಈ ವರ್ಷದ ಮಾರ್ಚ್ ನಲ್ಲಿ ಪಾಷಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾ.ಮೈಕೆಲ್ ಕುನ್ಹಾ ನೇತೃತ್ವದ ರಾಜ್ಯ ಉಚ್ಚ ನ್ಯಾಯಾಲಯದ ಪೀಠವು ನಿರಾಣಿ ಮತ್ತು ಯಡಿಯೂರಪ್ಪ ಆ್ಯಂಡ್ ಕಂಪನಿ ವಿರುದ್ಧ ಪ್ರಕರಣವನ್ನು ಮರುಸ್ಥಾಪಿಸಿದೆ. ನಿರಾಣಿಯವರನ್ನು ಆರೋಪಮುಕ್ತಗೊಳಿಸಿದ್ದ ಕೆಳ ನ್ಯಾಯಾಲಯದ ಆದೇಶವು ವಿಕೃತ, ವಿಚಿತ್ರವಾಗಿದೆ ಮತ್ತು ಸುಸ್ಥಿರವಲ್ಲ ಎಂದು ಅದು ತನ್ನ ಆದೇಶದಲ್ಲಿ ಹೇಳಿದೆ.

ಮಂಗಳವಾರ ನಗರದ ನ್ಯಾಯಾಲಯವೊಂದು ಸೆಪ್ಟೆಂಬರ್ವರೆಗೆ ಪ್ರಕರಣವನ್ನು ಮುಂದೂಡಿದೆ. ಆದರೆ ತಾನು ಕಾಲಮಿತಿಯ ಎಸಿಬಿ ತನಿಖೆಗೆ ಆಗ್ರಹಿಸುವುದಾಗಿ ಪಾಷಾ ಪರ ವಕೀಲ ಪಿ.ಎನ್.ಹೆಗಡೆ ತಿಳಿಸಿದ್ದಾರೆ. ಇಂತಹ ತನಿಖೆ 3-5 ತಿಂಗಳುಗಳಲ್ಲಿ ಮುಗಿಯುತ್ತದೆ ಎಂಬ ಆಶಯವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ ನಿರಾಣಿ ಇದೊಂದೇ ಸಂಕಷ್ಟವನ್ನು ಎದುರಿಸುತ್ತಿಲ್ಲ.
 
ಸ್ವತಃ ಕೈಗಾರಿಕೋದ್ಯಮಿಯಾಗಿರುವ ನಿರಾಣಿ ವಿರುದ್ಧ ಪಾಷಾ ಹಿತಾಸಕ್ತಿ ಸಂಘರ್ಷ ಮತ್ತು ಹಣಕಾಸು ಅವ್ಯವಹಾರದ ಗಂಭೀರ ಆರೋಪಗಳನ್ನೂ ಹೊರಿಸಿದ್ದಾರೆ. 2010ರ ಜಾಗತಿಕ ಹೂಡಿಕೆದಾರರ ಸಮಾವೇಶದ ನೇತೃತ್ವ ವಹಿಸಿದ್ದ ನಿರಾಣಿ ಸರಕಾರವು ಸ್ವಾಧೀನ ಪಡಿಸಿಕೊಂಡಿದ್ದ ಜಮೀನಿನಲ್ಲಿ ದೊಡ್ಡ ಭಾಗವು ತನ್ನ ಮತ್ತು ತನ್ನ ಕುಟುಂಬದ ಒಡೆತನದ ಕಂಪನಿಗಳಿಗೆ ವರ್ಗಾವಣೆಯಾಗುವಂತೆ ನೋಡಿಕೊಂಡಿದ್ದರು ಎಂದು ಪಾಷಾ ಆರೋಪಿಸಿದ್ದಾರೆ. 

ಹೂಡಿಕೆದಾರರ ಸಮಾವೇಶದಲ್ಲಿ ನಿರಾಣಿ ಅಥವಾ ಅವರ ಕುಟುಂಬಕ್ಕೆ ಸೇರಿದ ಕನಿಷ್ಠ ಮೂರು ಕಂಪನಿಗಳು ಸರಕಾರವು ಸ್ವಾಧೀನ ಪಡಿಸಿಕೊಂಡ ಭೂಮಿಗೆ ವಿನಿಮಯವಾಗಿ ಯೋಜನೆಗಳನ್ನು ಸ್ಥಾಪಿಸುವ ಹಾಗೂ ನೀರು ಮತ್ತು ವಿದ್ಯುತ್ ಸೌಲಭ್ಯಗಳನ್ನು ಅಭಿವೃದ್ಧಿಗೊಳಿಸುವ ಬಗ್ಗೆ ತಿಳುವಳಿಕೆ ಪತ್ರಗಳಿಗೆ ಸಹಿಹಾಕಿದ್ದವು. ಮಾಧ್ಯಮಗಳ ವರದಿಯಂತೆ ಈ ಮೂರೂ ಕಂಪನಿಗಳು ತಿಳುವಳಿಗೆ ಪತ್ರಗಳಿಗೆ ಸಹಿ ಹಾಕುವಾಗ ನಿಷ್ಕ್ರಿಯಗೊಂಡಿದ್ದವು ಅಥವಾ ನೊಂದಣಿಯನ್ನೇ ಹೊಂದಿರಲಿಲ್ಲ. ಕಳೆದ ತಿಂಗಳು ಕಾಂಗ್ರೆಸ್ ಸದಸ್ಯ ಎಚ್.ಎನ್.ರವೀಂದ್ರ ಅವರು ನಿರಾಣಿ ಕುಟುಂಬದ ನಿರಾಣಿ ಶುಗರ್ಸ್ ಸರಕಾರಿ ಲೀಸ್ ನ ಹಲವಾರು ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಎಸಿಬಿಗೆ ದೂರು ಸಲ್ಲಿಸಿದ್ದಾರೆ.

 ನಿರಾಣಿ ಸಚಿವರಾಗಿರುವುದು ತನಿಖಾ ಪ್ರಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ,ಹೀಗಾಗಿ ಈ ದೂರುಗಳಿಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ನಿರಾಣಿಯವರಿಂದ ವಾಪಸ್ ಪಡೆಯುವಂತೆ ಪಾಷಾ ಮುಖ್ಯಮಂತ್ರಿಗಳನ್ನು ಕೋರಿಕೊಂಡಿದ್ದಾರೆ. ಕೈಗಾರಿಕಾ ಸಚಿವರಾಗಿರುವ ನಿರಾಣಿಯವರ ಬಳಿ ಈ ಕಡತಗಳಿದ್ದರೆ ಅವರು ಅವುಗಳನ್ನು ತಿರುಚಬಹುದು ಎಂಬ ಶಂಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ. The Wire ಮಾಡಿದ್ದ ಕರೆಗಳು ಮತು ಎಸ್ಎಂಎಸ್ ಗಳಿಗೆ ಬೊಮ್ಮಾಯಿ ಪ್ರತಿಕ್ರಿಯಿಸಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X