ಕೇಂದ್ರ ಸಂಪುಟದ ರಾಜ್ಯದ ನೂತನ ಸಚಿವರ ಜನಾಶೀರ್ವಾದ ಯಾತ್ರೆ ನಾಚಿಕೆಗೇಡು: ದಿನೇಶ್ ಗುಂಡೂರಾವ್

ಬೆಂಗಳೂರು, ಆ.16: ಕೇಂದ್ರ ಸಂಪುಟದ ರಾಜ್ಯದ ನೂತನ ಸಚಿವರು ರಾಜ್ಯದಲ್ಲಿ ಜನಾಶೀರ್ವಾದ ಯಾತ್ರೆ ನಡೆಸುತ್ತಿರುವುದು ನಾಚಿಕೆಗೇಡು. ಜನರು ಮೋದಿ ಸರಕಾರಕ್ಕೆ ಆಶೀರ್ವಾದ ಮಾಡಿದ ತಪ್ಪಿಗೆ ಈಗಾಗಲೆ ಪ್ರಾಯಶ್ಚಿತ್ತ ಅನುಭವಿಸುತ್ತಿದ್ದಾರೆ. ಜನರನ್ನು ಹುರಿದು ಮುಕ್ಕುತ್ತಿರುವ ಈ ಕೇಂದ್ರ ಸರಕಾರದ ಮೇಲೆ ಜನರಿಗೆ ಈಗ ಯಾವ ಪ್ರೀತಿಯೂ ಇಲ್ಲ. ಈಗ್ಯಾಕೆ ಈ ಯಾತ್ರೆಯ ನಾಟಕ? ಎಂದು ಎಐಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಸಚಿವ ಸ್ಥಾನ ಕೊಟ್ಟ ಮೋದಿಯವರನ್ನು ಮೆಚ್ಚಿಸಲು ರಾಜ್ಯದ ನಾಲ್ಕು ಸಚಿವರು ಜನಾಶೀರ್ವಾದ ಯಾತ್ರೆ ಮಾಡುತ್ತಿದ್ದಾರೆ. ಯಾತ್ರೆ ಮಾಡುತ್ತಿರುವ ಸಚಿವರಿಗೆ, ಈ ಸರಕಾರದ ದುರಾಡಳಿತದಿಂದ ಜನರು ಅನುಭವಿಸುತ್ತಿರುವ ಸಂಕಷ್ಟ ತಿಳಿದಿಲ್ಲ. ಪಕ್ಷದ ಕಾರ್ಯಕರ್ತರ ಮಧ್ಯೆ ಯಾತ್ರೆ ನಡೆಸುವ ಬದಲು ಜನರ ಬಳಿಗೆ ಹೋಗಲಿ. ಆಗ ಜನಾಶೀರ್ವಾದದ ವಾಸ್ತವ ಅರಿವಾಗಲಿದೆ ಎಂದು ತಿಳಿಸಿದ್ದಾರೆ.
1
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) August 16, 2021
ಕೇಂದ್ರ ಸಂಪುಟದ ರಾಜ್ಯದ ನೂತನ ಸಚಿವರು ರಾಜ್ಯದಲ್ಲಿ ಜನಾರ್ಶಿವಾದ ಯಾತ್ರೆ ನಡೆಸುತ್ತಿರುವುದು ನಾಚಿಕೆಗೇಡು.
ಜನರು ಮೋದಿ ಸರ್ಕಾರಕ್ಕೆ ಆರ್ಶಿವಾದ ಮಾಡಿದ ತಪ್ಪಿಗೆ ಈಗಾಗಲೆ ಪ್ರಾಯಶ್ಚಿತ್ತ ಅನುಭವಿಸುತ್ತಿದ್ದಾರೆ.
ಜನರನ್ನು ಹುರಿದು ಮುಕ್ಕುತ್ತಿರುವ ಈ ಕೇಂದ್ರ ಸರ್ಕಾರದ ಮೇಲೆ ಜನರಿಗೆ ಈಗ ಯಾವ ಪ್ರೀತಿಯೂ ಇಲ್ಲ.
ಈಗ್ಯಾಕೆ ಈ ಯಾತ್ರೆಯ ನಾಟಕ?







