ಪೊಲ್ಯ ಹಿಮಾಯತುಲ್ ಇಸ್ಲಾಂ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಕಾಪು, ಆ.16: ಉಚ್ಚಿಲ ಪೊಲ್ಯ ಹಿಮಾಯತುಲ್ ಇಸ್ಲಾಂ ಮಸೀದಿ ಮತ್ತು ಮದ್ರಸದ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಮದ್ರಸದ ಅಧ್ಯಕ್ಷ ಹಸನ್ ಮುನ್ನಾ ನೆರವೇರಿಸಿದರು.
ಮುಅಲ್ಲಿಂ ಅಬ್ದುಲ್ ರಶೀದ್ ಜಲಾಲಿ ದುವಾ ನೆರವೇರಿಸಿದರು. ಗೌರವಾಧ್ಯಕ್ಷ ಹಾತಿಂ ಶೇಖ್, ಕಾರ್ಯದರ್ಶಿ ಇಬ್ರಾಹಿಂ ಕೆ.ಎಚ್., ಜೊತೆ ಕಾರ್ಯದರ್ಶಿ ಶಬ್ಬೀರ್ ಸುಲೈಮಾನ್, ಮಾಜಿ ಅಧ್ಯಕ್ಷರುಗಳಾದ ಕೆ.ಎಚ್. ಸುಲೈಮಾನ್, ಸಾಬಾನ್ ಶಾ ಕೊಟೇಜ್ ಉಪಸ್ಥಿತರಿದ್ದರು.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಏರ್ಪಡಿಸಲಾದ ಬರವಣಿಗೆ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಹನೀಫ್ ಪೊಲ್ಯ ಕಾರ್ಯ ಕ್ರಮ ನಿರೂಪಿಸಿದರು.
Next Story





