'ಎಚ್ಐಎಫ್ ಇಂಡಿಯಾ' ನೂತನ ಅಧ್ಯಕ್ಷರಾಗಿ ನಾಝಿಮ್ ಎಕೆ

ನಾಝಿಮ್ ಎಕೆ
ಮಂಗಳೂರು : ಹೈಲ್ಯಾಂಡ್ ಇಸ್ಲಾಮಿಕ್ ಫೋರಮ್ ಇಂಡಿಯಾ ಇದರ ನೂತನ ಅಧ್ಯಕ್ಷರಾಗಿ ನಾಝಿಮ್ ಎಕೆ ಅವರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಗಿದೆ. ಮುಂದಿನ ಮೂರು ವರ್ಷಗಳ ಕಾಲ ಅಧ್ಯಕ್ಷ ಸ್ಥಾನವನ್ನು ಅವರು ವಹಿಸಲಿದ್ದಾರೆ.
ಸಂಸ್ಥೆಯ ಆಡಿಟೋರಿಯಂನಲ್ಲಿ ಮಹಾಸಭೆ ನಡೆಯಿತು. ವಾರ್ತಾಭಾರತಿಯ ಮೊಹಮ್ಮದ್ ಮುಸ್ಲಿಮ್ ಕೊಪ್ಪ ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಅಧ್ಯಕ್ಷ ಸಾಜಿದ್ ಎಕೆ ವಹಿಸಿದ್ದರು. ಚುನಾವಣಾ ಸಭೆಯನ್ನು ಅಶ್ರಫ್ ಅವರು ನಿರೂಪಿಸಿ, ವಂದಿಸಿದರು.
Next Story





