ಸರಕಾರಿ ಹಾಸ್ಟೇಲ್ ಹೊರಗುತ್ತಿಗೆ ನೌಕರರಿಂದ ಸಚಿವರಿಗೆ ಮನವಿ

ಉಡುಪಿ, ಆ.17: ಕಳೆದ ಹತ್ತು ತಿಂಗಳ ಸಂಬಳ ಬಾಕಿ ಪಾವತಿಸಬೇಕು. ಕೆಲಸದ ಭದ್ರತೆ, ಹೊರಗುತ್ತಿಗೆ ಪದ್ಧತಿ ರದ್ಧತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಜ್ಯ ಸರಕಾರಿ ಹಾಸ್ಟೇಲ್ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕರರ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಹೊರಗುತ್ತಿಗೆ ನೌಕರರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ವೆಂಕಟೇಶ್ ಕೋಣಿ, ಜಿಲ್ಲಾ ಮುಖಂಡರಾದ ಹರೀಶ್ ಬೈಂದೂರು, ಲತಾ ಯು., ನಾಗರಾಜ ಬೈಂದೂರು, ಕಲ್ಪನಾ ಉಡುಪಿ, ಶಾರದಾ ಪಡುವರಿ, ರೇಣುಕ ಯಡ್ತರೆ ಮೊದಲಾದವರು ಉಪಸ್ಥಿತರಿದ್ದರು.
Next Story





