ಇತಿಹಾಸ ತಿರುಚಿ ಬರೆಯುವ ಕೆಲಸ ಸರಿಯಲ್ಲ: ಬಿ.ಎಂ.ರೋಹಿಣಿ

ಶಿರ್ವ, ಆ.17: ಇತಿಹಾಸವನ್ನು ತಿರುಚಿ ಬರೆಯುವ ಕೆಲಸಗಳು ನಿರಂತರ ವಾಗಿ ನಡೆಯುತ್ತಿವೆ. ಇತಿಹಾಸಕಾರರು ಸುಳ್ಳುಗಳನ್ನು ಬರೆಯದೆ ಮೂಲವನ್ನು ಹುಡುಕಿ ಬರೆಯಬೇಕಾಗಿದೆ ಎಂದು ಹಿರಿಯ ಸಾಹಿತಿ ಬಿ.ಎಂ.ರೋಹಿಣಿ ಮಂಗಳೂರು ಹೇಳಿದ್ದಾರೆ.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಾಪು ತಾಲೂಕು ಘಟಕದ ಸಹಭಾಗಿತ್ವದಲ್ಲಿ ರವಿವಾರ ಬೆಳ್ಳೆ ಪಾಂಬೂರು ಸಮುದಾಯ ಭವನದಲ್ಲಿ ನಡೆದ ಸಮಾರಂದಲ್ಲಿ ಆರ್.ಡಿ.ಪಾಂಬೂರು ಬರೆದ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ರಾಜ್ಯ ಪ್ರಶಸ್ತಿ ಪುರಸ್ಕೃತ ಇತಿಹಾಸದ ಬೆಳಕಿನಲ್ಲಿ ಬೊಳ್ಳದ ಊರು- ಬೆಳ್ಳೆಯ ಸಂಕ್ಷಿಪ್ತ ಚರಿತ್ರೆ ದ್ವಿತೀಯ ವಿಸ್ತೃತ ಆವೃತ್ತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮವನ್ನು ಐಕಳ ಪಾಂಪೈ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ.ಜೆ.ಸಿ.ಮಿರಾಂಡಾ ಉದ್ಘಾಟಿಸಿದರು. ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಮಾಜಿ ರಾಜ್ಯಾಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್ ನಿವೃತ್ತ ಯೋಧರನ್ನು ಸನ್ಮಾನಿಸಿದರು. ಅಧ್ಯಕ್ಷತೆಯನ್ನು ಕಸಾಪ ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ಉಡುಪಿ ಎಂಜಿಎಂ ಕಾಲೇಜಿನ ಉಪನ್ಯಾಸಕ ಸುಚಿತ್ ಕೊಟ್ಯಾನ್ ಕೃತಿ ಪರಿಚಯ ಮಾಡಿದರು.
ಮುಖ್ಯ ಅತಿಥಿಗಳಾಗಿ ಬೆಳ್ಳೆ ಗ್ರಾಪಂ ಅಧ್ಯಕ್ಷ ಸುಧಾಕರ ಪೂಜಾರಿ, ಮಂಗಳೂರು ಕರ್ನಾಟಕ ಬ್ಯಾಂಕ್ ಡಿಜಿಎಂ ಬೆಳ್ಳೆ ಗೋಪಾಲಕೃಷ್ಣ ಸಾಮಗ, ಉಡುಪಿ ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಹಿರಿಯ ರಾದ ಬೆಳ್ಳೆ ಅಂಗಡಿ ಸದಾನಂದ ಶೆಣೈ, ಪ್ರದೀಪ್ ಕ್ವಾಡ್ರಸ್, ಗ್ರಾಪಂ ಸದಸ್ಯ ಹರೀಶ್ ಶೆಟ್ಟಿ, ಪಡುಬೆಳ್ಳೆ ಶ್ರೀನಾರಾಯಣಗುರು ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಉಷಾ ಎಸ್., ಮೂಡುಬೆಳ್ಳೆ ಪ.ಪೂ.ಕಾಲೇಜಿನ ಪ್ರಾಚಾರ್ಯ ಎಡ್ವರ್ಡ್ ಲಾರ್ಸನ್ ಡಿಸೋಜ, ಗ್ರಾಪಂ ಸದಸ್ಯ ಅಶೋಕ್, ಕಾಪು ತಾಲೂಕು ಕಸಾಪ ಗೌರವ ಕಾರ್ಯದರ್ಶಿ ವಿದ್ಯಾಧರ್ ಪುರಾಣಿಕ್, ಸದಸ್ಯ ನೀಲಾನಂದ ನಾಯ್ಕ್ಕಾ ಉಪಸ್ಥಿತರಿದ್ದರು.
ಲೇಖಕ ರಿಚಾರ್ಡ್ ದಾಂತಿ ಪಾಂಬೂರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅಶ್ವಿನ್ ಲಾರೆನ್ಸ್ ಕಾರ್ಯಕ್ರಮ ನಿರೂಪಿಸಿದರು. ಆಕಾಶವಾಣಿ ಗಾಯಕ ಗಣೇಶ್ ಗಂಗೊಳ್ಳಿ ಗೀತಾಗಾಯನ ಕಾರ್ಯಕ್ರಮ ನಡೆಯಿತು.







