ಜಮ್ಮು-ಕಾಶ್ಮೀರ: ಬಿಜೆಪಿ ನಾಯಕನನ್ನು ಗುಂಡಿಕ್ಕಿ ಹತ್ಯೆಗೈದ ಭಯೋತ್ಪಾದಕರು

photo: twitter
ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಮ್ನಲ್ಲಿ ಮಂಗಳವಾರ ಬಿಜೆಪಿ ನಾಯಕನನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಇದು ಒಂದು ವಾರದಲ್ಲಿ ನಡೆದ ಎರಡನೇ ಘಟನೆಯಾಗಿದೆ ಮೃತ ಜಾವಿದ್ ಅಹ್ಮದ್ ದಾರ್ ಅವರು ಜಿಲ್ಲೆಯಲ್ಲಿ ಬಿಜೆಪಿಯ ಕ್ಷೇತ್ರ ಉಸ್ತುವಾರಿಯಾಗಿದ್ದರು.
ಆಗಸ್ಟ್ 9 ರಂದು ಜಮ್ಮು ಹಾಗೂ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಬಿಜೆಪಿಯ ಕಿಸಾನ್ ಮೋರ್ಚಾದ ಜಿಲ್ಲಾ ಮುಖ್ಯಸ್ಥರಾಗಿದ್ದ ಗುಲಾಂ ರಸೂಲ್ ದಾರ್ ಹಾಗೂ ಅವರ ಪತ್ನಿಯನ್ನು ಅನಂತನಾಗ್ ನಲ್ಲಿ ಭಯೋತ್ಪಾದಕರು ಹತ್ಯೆಗೈದಿದ್ದರು.
ಜಾವಿದ್ ಅಹ್ಮದ್ ದಾರ್ ಹತ್ಯೆಯನ್ನು "ಬರ್ಬರ" ಕೃತ್ಯ ಎಂದು ಬಿಜೆಪಿ ಕರೆದಿದೆ. ಈ ಪ್ರದೇಶದ ಎಲ್ಲ ರಾಜಕೀಯ ಪಕ್ಷಗಳು ಕೂಡ ಘಟನೆಯನ್ನು ತೀವ್ರವಾಗಿ ಖಂಡಿಸಿವೆ.
"ನಮ್ಮ ಕಾರ್ಯಕರ್ತರ ತ್ಯಾಗ ಎಂದಿಗೂ ವ್ಯರ್ಥವಾಗುವುದಿಲ್ಲ. ಈ ದೇಶವಿರೋಧಿಗಳು ತಮ್ಮ ತಪ್ಪು ಕೆಲಸಗಳಲ್ಲಿ ಎಂದಿಗೂ ಯಶಸ್ವಿಯಾಗುವುದಿಲ್ಲ" ಎಂದು ಬಿಜೆಪಿಯ ಅಶೋಕ್ ಕೌಲ್ ಹೇಳಿದರು.
ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಈ ಹತ್ಯೆಯನ್ನು ಖಂಡಿಸಿದರು ಹಾಗೂ "ಅಂತಹ ಹಿಂಸಾಚಾರಗಳಿಗೆ ಯಾವುದೇ ಸ್ಥಳವಿಲ್ಲ" ಎಂದು ಹೇಳಿದರು.
One more coward attack on our Activist from District Kulgam namely Shri Javaid Ahmed Dar, Constituency President who succumbs to injuries. The sacrifices of our Activists will never go in vain. These Anti-national elements will never be successful in their wrongdoings. pic.twitter.com/vxvjfOGF2o
— Ashok Koul (@AshokKoul59) August 17, 2021







