ಉಡುಪಿ: ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ
ಉಡುಪಿ, ಆ.17: ಉಡುಪಿ ನಗರಸಭಾ ವ್ಯಾಪ್ತಿಯ ಎಸ್ಪಿ ಕಚೇರಿ ಮತ್ತು ಪುತ್ತೂರು ಉಪಕಚೇರಿಯಲ್ಲಿರುವ ಓವರ್‌ಹೆಡ್ ಟ್ಯಾಂಕ್, ಅಜ್ಜರಕಾಡು ಮತ್ತು ಕೊಡವೂರಿನಲ್ಲಿರುವ ಓವರ್‌ಹೆಡ್ ಟ್ಯಾಂಕ್, ಬಜೆ, ಇಂದಿರಾನಗರ, ಕಲ್ಮಾಡಿ, ಬಾಳೆಕಟ್ಟೆ ಮಣಿಪಾಲ ಮತ್ತು ಹುಡ್ಕೋ ಕಾಲೋನಿಯಲ್ಲಿ ರುವ ಓವರ್ ಹೆಡ್ ಟ್ಯಾಂಕ್ ಹಾಗೂ ಬಜೆಯಲ್ಲಿರುವ ಫಿಲ್ಟರ್ ಟ್ಯಾಂಕ್‌ನ ಸ್ಪಚ್ಛಗೊಳಿಸುವ ಕಾರ್ಯ ಆಗಸ್ಟ್ 19ರಿಂದ 22ರವರೆಗೆ ನಡೆಯಲಿರು ವುದರಿಂದ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ನಗರ ಸಭೆಯೊಂದಿಗೆ ಸಹಕರಿಸುವಂತೆ ಉಡುಪಿ ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
Next Story





