ಕಾಂಗ್ರೆಸ್ ಕಚೇರಿಗೆ ಬಾರ್ ಎಂದು ಹೆಸರಿಡಲಿ: ಸಂಸದ ಪಿ.ಸಿ.ಮೋಹನ್ ವಿವಾದಾತ್ಮಕ ಹೇಳಿಕೆ

ಸಂಸದ ಪಿ.ಸಿ.ಮೋಹನ್
ಬೆಂಗಳೂರು, ಆ.17: ಕಾಂಗ್ರೆಸ್ ಕಚೇರಿಗೆ ಬೇಕಾದರೆ ಮದ್ಯದಂಗಡಿ(ಬಾರ್) ಎಂದು ನಾಮಕರಣ ಮಾಡಲಿ ಎಂದು ಬಿಜೆಪಿ ಸಂಸದ ಪಿ.ಸಿ.ಮೋಹನ್ ವಿವಾದಿತ ಹೇಳಿಕೆ ನೀಡಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಿಗೆ ಸಂಜೆ ಆಗುತ್ತಿದ್ದಂತೆ ಯಾವುದರ ಚಿಂತೆ ಶುರುವಾಗುತ್ತದೆಯೋ ಅದರ ಬಗ್ಗೆ ಕಾಂಗ್ರೆಸ್ನವರು ಮಾತನಾಡುತ್ತಾರೆ. ಹಾಗಾಗಿ, ಅವರು ತಮ್ಮ ಪಕ್ಷದ ಕಚೇರಿಗೆ ಆ ಹೆಸರಿಡಲಿ ಎಂದು ವಾಗ್ದಾಳಿ ನಡೆಸಿದರು.
ನೆಹರೂ ಹಾಗೂ ಇಂದಿರಾ ಗಾಂಧಿ ವಿರುದ್ಧ ಸಿಟಿ ರವಿ ಹೇಳಿಕೆಯ ಬೆನ್ನಲ್ಲೇ ಇದೀಗ ಸಂಸದ ಪಿ.ಸಿ.ಮೋಹನ್ ಈ ಹೇಳಿಕೆ ನೀಡಿದ್ದಾರೆ.
Next Story





