ಮೆಸ್ಕಾಂ ಮಾಪಕ ಓದುಗರನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಮನವಿ

ಕಾರ್ಕಳ, ಆ.17: ಹೊರಗುತ್ತಿಗೆ ರದ್ದುಪಡಿಸಿ ಕೆಲಸ ಖಾಯಂ ಮಾಡುವಂತೆ ಆಗ್ರಹಿಸಿ ಮೆಸ್ಕಾಂ ವಿಭಾಗದ ಹೊರಗುತ್ತಿಗೆ ಮಾಪಕ ಓದುಗರು ಇಂಧನ ಸಚಿವ ಸುನೀಲ್ ಕುಮಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಕಳೆದ 20ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಮಾಪಕ ಓದುಗರಿಗೆ ಕನಿಷ್ಠ ವೇತನ ಅಥವಾ ಸೇವಾ ಭದ್ರತೆ ಇರುವುದಿಲ್ಲ. ಇಷ್ಟು ವರ್ಷಗಳಿಂದ ದುಡಿಯುತ್ತಿದ್ದರೂ ಮಾಸಕಿ ಕೇವಲ 9-10ಸಾವಿರ ರೂ. ಮಾತ್ರ ನೀಡಲಾಗುತ್ತಿದೆ. ಹೊರಗುತ್ತಿಗೆಯವರ ಕಿರುಕುಳ ಹಾಗೂ ಕೆಲಸದ ಭದ್ರತೆ ಇಲ್ಲದಿರುವುದರಿಂದ ಜೀವನ ಕಷ್ಟಕರವಾಗಿದೆ ಎಂದು ನಿಯೋಗ ಮನವಿ ಯಲ್ಲಿ ತಿಳಿಸಿದೆ.
ಮೆಸ್ಕಾಂ ಹೊರತು ಪಡಿಸಿ ಉಳಿದ ಎಲ್ಲ ಕಡೆಗಳಲ್ಲಿ ಗ್ರಾಮ ಪ್ರತಿನಿಧಿ ಇದ್ದಾರೆ. ನಮ್ಮನ್ನು ಇಲ್ಲಿ ಜೀತದಾಳುವಿನಂತೆ ದುಡಿಸಿಕೊಳ್ಳುತ್ತಿದ್ದಾರೆ. ಪ್ರತಿ ತಿಂಗಳು ದಿನಕ್ಕೆ ಕನಿಷ್ಠ 10ರಿಂದ 15ಕಿ.ಮೀ. ನಡೆದು ಮನೆ ಮನೆಗೆ ಭೇಟಿ ನೀಡಿ ಬಿಲ್ ನೀಡು ತ್ತಿದ್ದೇವೆ. ಆದುದರಿಂದ ಈ ಬಗ್ಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕೆಂದು ನಿಯೋಗ ಸಚಿವರನ್ನು ಒತ್ತಾಯಿಸಿದೆ.
Next Story





