ಸಿ.ಟಿ.ರವಿ ಕಚ್ಚುವುದಕ್ಕೆ ಆರಂಭಿಸಿದ್ದಾರೆ, ಈಗ ನನ್ನನ್ನೇ ಕಚ್ಚಿದ್ದಾರೆ: ಶಾಸಕ ಎಂ.ಪಿ.ಕುಮಾರಸ್ವಾಮಿ

ಬೆಂಗಳೂರು, ಆ.17: ಬಿಜೆಪಿ ನಾಯಕ ಸಿ.ಟಿ.ರವಿ ಹೊಸದಿಲ್ಲಿಯಿಂದ ಎದುರಿಗೆ ಸಿಕ್ಕವರನ್ನು, ಅಡ್ಡ ಸಿಕ್ಕವರನ್ನು ಕಚ್ಚುವುದಕ್ಕೆ ಆರಂಭಿಸಿದ್ದಾರೆ. ಇದೀಗ ನನ್ನನ್ನೇ ಕಚ್ಚಿದ್ದಾರೆ ಎಂದು ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವಿಬ್ಬರೂ ಒಂದೇ ಊರಿನವರು, ಕುಳಿತು ಮಾತಾಡಬೇಕು. ಇಬ್ಬರೂ ಕುಳಿತು ಮಾತನಾಡಿಕೊಳ್ಳುವುದು ಒಳ್ಳೆಯದು. ಅಲ್ಲದೆ, ಈಗ ನಾನು ಸಚಿವ ಸ್ಥಾನವನ್ನು ಕೇಳುವ ಸಮಯ ಬಂದಿಲ್ಲ. ಸಮಯ ಬಂದಾಗ ಎಲ್ಲರಿಗಿಂತ ಮೊದಲೇ ನಾನು ಕೇಳುತ್ತೇನೆ ಎಂದು ನುಡಿದರು.
ಇನ್ನು, ಕಂದಾಯ ಸಚಿವ ಆರ್.ಅಶೋಕ್ ಕಷ್ಟ ಅರಿತು ನನ್ನ ಕ್ಷೇತ್ರದ ಪ್ರವಾಹದ ಸಮಸ್ಯೆ ಬಗೆಹರಿಸಿದ್ದಾರೆ. ತಡವಾಗಿ ಆದರೂ ಮೂಡಿಗೆರೆ ಕ್ಷೇತ್ರವನ್ನು ಅತಿವೃಷ್ಟಿ ಪೀಡಿತ ತಾಲೂಕಿಗೆ ಸೇರಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
Next Story





