ವಿದ್ಯುತ್ ಆಘಾತದಿಂದ ಯುವಕ ಮೃತ್ಯು
ಕೊಲ್ಲೂರು, ಆ.17: ವಿದ್ಯುತ್ ಸ್ವಿಚ್ ಬೋರ್ಡ್ ಸರಿಪಡಿಸುತ್ತಿದ್ದ ವ್ಯಕ್ತಿ ಯೊಬ್ಬರು ವಿದ್ಯುತ್ ಶಾಕ್ನಿಂದ ಮೃತಪಟ್ಟ ಘಟನೆ ಆ.16ರಂದು ಸಂಜೆ ವೇಳೆ ಜಡ್ಕಲ್ ಗ್ರಾಮದ ಜಡ್ಡಿನ ಮುಲ್ಲೆ ಎಂಬಲ್ಲಿ ನಡೆದಿದೆ.
ಮೃತರನ್ನು ಜಡ್ಡಿನಮುಲ್ಲೆ ನಿವಾಸಿ ಜೈಸನ್(35) ಎಂದು ಗುರುತಿಸಲಾಗಿದೆ. ಇವರು ಮನೆಯ ವಿದ್ಯುತ್ ಸ್ವೀಚ್ ಬೋರ್ಡ್ನ್ನು ಸರಿಪಡಿಸುತ್ತಿದ್ದಾಗ ಆಕಸ್ಮಿಕ ವಾಗಿ ಕೈ ಹಾಗೂ ದೇಹಕ್ಕೆ ವಿದ್ಯುತ್ ತಗುಲಿತ್ತೆನ್ನಲಾಗಿದೆ. ಇದರಿಂದ ಕುಸಿದು ಬಿದ್ದು ತೀವ್ರವಾಗಿ ಅಸ್ವಸ್ಥಗೊಂಡ ಅವರು, ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ದಾರಿ ಮಧ್ಯೆ ಮೃತಪಟ್ಟರು.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story