ಟ್ಯಾಲೆಂಟ್ ಮದ್ರಸ ಎಕ್ಸಲೆನ್ಸಿ ಅವಾರ್ಡ್-2021 ಪ್ರಶಸ್ತುಗೆ ಅರ್ಜಿ ಅಹ್ವಾನ

ಮಂಗಳೂರು : ಪ್ರತೀ ವರ್ಷದಂತೆ ಈ ಬಾರಿಯೂ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ 16 ವಿದ್ಯಾರ್ಥಿಗಳಿಗೆ ಟ್ಯಾಲೆಂಟ್ ಮದ್ರಸ ಎಕ್ಸಲೆನ್ಸಿ ಅವಾರ್ಡ್-2021 ಪ್ರಶಸ್ತಿ ನೀಡಿ ಗೌರವಿಸಲಾಗುವುದು.
5ನೇ ತರಗತಿಯಲ್ಲಿ ಟಾಪ್ 5, 7ನೇ ತರಗತಿಯಲ್ಲಿ ಟಾಪ್ 5, 10ನೇ ತರಗತಿಯಲ್ಲಿ ಟಾಪ್ 3 ಮತ್ತು 12ನೇ ತರಗತಿಯಲ್ಲಿ ಟಾಪ್ 3 ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು.
ದಕ್ಷಿಣ ಕನ್ನಡ ಜಿಲ್ಲೆಗೆ ಒಳಪಟ್ಟ ವಿದ್ಯಾರ್ಥಿಗಳು ಮದ್ರಸ ದೃಢೀಕರಣ ಅಂಕಪಟ್ಟಿ ಮತ್ತು ಫೋಟೊದೊಂದಿಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು, ಅರ್ಜಿಯನ್ನು ವ್ಯಯಕ್ತಿಕವಾಗಿ, ಖುದ್ದಾಗಿ, ಅಂಚೆ ಮೂಲಕ ಈ-ಮೇಲ್ ಅಥವಾ ವಾಟ್ಸ್ಆ್ಯಪ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಬಂದ ಅರ್ಜಿಗಳಲ್ಲಿ ಆಯ್ಕೆ ಮಾಡಿ ಪ್ರಶಸ್ತಿಗೆ ಪರಿಗಣಿಸಲಾಗುವುದು. ಅರ್ಜಿ ಸಲ್ಲಿಸಲು 28-08-2021 ಕೊನೆಯ ದಿನಾಂಕ.
ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ವಿಶ್ವಾಸ್ ಕ್ರೌನ್ ಬಿಲ್ಡಿಂಗ್, ಯೆನೆಪೋಯ ನರ್ಸಿಂಗ್ ಹೋಂ ಯೆದುರುಗಡೆ, ಕಂಕನಾಡಿ ಮಂಗಳೂರು. 9972283365, 9449883171 ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.





