ಒಂದೇ ದಿನ 88.13 ಲಕ್ಷ ಡೋಸ್ ಲಸಿಕೆ ನೀಡಿಕೆ

ಹೊಸದಿಲ್ಲಿ, ಆ.17: ಮಂಗಳವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆಯ ಅವಧಿಯಲ್ಲಿ ದೇಶದಲ್ಲಿ 88.13 ಲಕ್ಷಕ್ಕೂ ಅಧಿಕ ಡೋಸ್ ಕೋವಿಡ್ ಲಸಿಕೆ ನೀಡಿದ್ದು ಇದು ನೂತನ ದಾಖಲೆಯಾಗಿದೆ ಎಂದು ಆರೋಗ್ಯ ಇಲಾಖೆ ಮಂಗಳವಾರ ಹೇಳಿದೆ.
ಭಾರತ ಒಂದೇ ದಿನದ ದಾಖಲೆ ಲಸಿಕೀಕರಣ ದಾಖಲಿಸಿದ್ದು ನಿನ್ನೆಯ ದಿನ ವಿಶ್ವದ ಅತ್ಯಧಿಕ ಲಸಿಕೀಕರಣ ದಿನದ ದಾಖಲೆಗೆ ಸೇರಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು 55,47,30,609 ಡೋಸ್ ಲಸಿಕೆ ನೀಡಲಾಗಿದೆ. ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ 56.81 ಕೋಟಿ ಡೋಸ್ ಲಸಿಕೆ ಪೂರೈಸಿದ್ದು, 1,09,32,960 ಡೋಸ್ ಲಸಿಕೆ ಪೂರೈಕೆ ಹಂತದಲ್ಲಿದೆ ಎಂದು ಇಲಾಖೆ ಹೇಳಿದೆ.
Next Story





