ಭಾರತ: 25,166 ಹೊಸ ಸೋಂಕು ಪ್ರಕರಣ ದಾಖಲು

ಹೊಸದಿಲ್ಲಿ, ಆ.17: ಭಾರತದಲ್ಲಿ ಮಂಗಳವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆ ಅವಧಿಯಲ್ಲಿ 25,166 ಹೊಸ ಕೊರೋನ ಸೋಂಕು ಪ್ರಕರಣ ದಾಖಲಾಗಿದ್ದು ಕಳೆದ 154 ದಿನಗಳಲ್ಲಿ ಇದು ಅತ್ಯಂತ ಕನಿಷ್ಟವಾಗಿದೆ. ದೇಶದಲ್ಲಿ ಸೋಂಕಿತರ ಪ್ರಮಾಣ 3,22,50,679ಕ್ಕೇರಿದ್ದು, ರಾಷ್ಟ್ರೀಯ ಚೇತರಿಕೆಯ ದರ 97.51% ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಹೇಳಿದೆ.
ಈ ಅವಧಿಯಲ್ಲಿ 437 ಸಾವಿನ ಪ್ರಕರಣ ದಾಖಲಾಗುವುದರೊಂದಿಗೆ ಮೃತರ ಸಂಖ್ಯೆ 4,32,079ಕ್ಕೇರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3,69,846ಕ್ಕೆ ಇಳಿದಿದ್ದು ಕಳೆದ 146 ದಿನಗಳಲ್ಲೇ ಇದು ಕನಿಷ್ಟವಾಗಿದೆ. ಇದು ಒಟ್ಟು ಸೋಂಕು ಪ್ರಕರಣಗಳ 1.15% ಆಗಿದೆ. ಸೋಮವಾರ 15,63,985 ಸೋಂಕಿನ ಮಾದರಿ ಪರೀಕ್ಷೆ ನಡೆಸಿದ್ದು ದೇಶದಲ್ಲಿ ಕೊರೋನ ಸೋಂಕು ಮಾದರಿ ಒಟ್ಟು ಪರೀಕ್ಷೆಯ ಪ್ರಮಾಣ 49,66,29,524ಕ್ಕೇರಿದೆ ಎಂದು ಇಲಾಖೆ ಹೇಳಿದೆ.
Next Story





