ತಮಿಳು ಕಿರುತೆರೆ ನಟ,ನಿರೂಪಕ ಆನಂದ ಕಣ್ಣನ್ ನಿಧನ

photo: twitter
ಹೊಸದಿಲ್ಲಿ: ತಮಿಳು ಕಿರುತೆರೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಟಿವಿ ನಟ ಹಾಗೂ ನಿರೂಪಕ ಆನಂದ್ ಕಣ್ಣನ್ ಸೋಮವಾರ ಕ್ಯಾನ್ಸರ್ ನಿಂದಾಗಿ ನಿಧನರಾದರು. ಅವರಿಗೆ 48 ವರ್ಷ ವಯಸ್ಸಾಗಿತ್ತು.
ಆನಂದ ಕಣ್ಣನ್ ಅವರು 90 ರ ದಶಕ ಹಾಗೂ 2000 ರ ದಶಕದ ಆರಂಭದಲ್ಲಿ ಟಿವಿ ನಿರೂಪಣೆಯಲ್ಲಿ ಖ್ಯಾತಿ ಪಡೆದಿದ್ದರು. ಕಣ್ಣನ್ ನಿಧನಕ್ಕೆ ದಕ್ಷಿಣ ಭಾರತದ ಅನೇಕ ಸೆಲೆಬ್ರಿಟಿಗಳು ಟ್ವಿಟರ್ನಲ್ಲಿ ಗೌರವ ಸಲ್ಲಿಸಿದರು.
'ಸರೋಜಾ' ಚಿತ್ರದಲ್ಲಿ ಆನಂದರೊಂದಿಗೆ ಕೆಲಸ ಮಾಡಿದ್ದ ಚಲನಚಿತ್ರ ನಿರ್ಮಾಪಕ ವೆಂಕಟ್ ಪ್ರಭು, ಟ್ವಿಟರ್ನಲ್ಲಿ ಆನಂದ್ ಅವರ ನಿಧನವನ್ನು ದೃಢಪಡಿಸಿದರು. ವೆಂಕಟ್ ಪ್ರಭು ಅವರು ದಿವಂಗತ ನಟನ ಚಿತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ ಹಾಗೂ ಅವರ ಸಾವಿಗೆ ದುಃಖ ವ್ಯಕ್ತಪಡಿಸಿದ್ದಾರೆ. "ಒಬ್ಬ ಮಹಾನ್ ಸ್ನೇಹಿತ ಒಬ್ಬ ಮಹಾನ್ ಮಾನವ ಇನ್ನಿಲ್ಲ !! #RIPanandakannan ನನ್ನ ಆಳವಾದ ಸಂತಾಪಗಳು'' ಎಂದು ಪ್ರಭು ಟ್ವೀಟಿಸಿದ್ದಾರೆ.
ಆನಂದ ಕಣ್ಣನ್ ಚೆನ್ನೈಗೆ ಸ್ಥಳಾಂತರಗೊಳ್ಳುವ ಮೊದಲು ಸಿಂಗಾಪುರದಲ್ಲಿ ನಿರೂಪಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ಚೆನ್ನೈನಲ್ಲಿ ರೇಡಿಯೋ ಜಾಕಿಯಾಗಿ ಕೆಲಸ ಮಾಡಿದ ನಂತರ ಅವರು ವಿಜೆ ಆಗಿ ಟಿವಿ ಚಾನೆಲ್ಗೆ ಸೇರಿದ್ದರು.





