ಪಾಕ್ ಆಕ್ರಮಿತ ಕಾಶ್ಮೀರದ ಅಧ್ಯಕ್ಷರಾಗಿ ಸುಲ್ತಾನ್ ಮಹ್ಮೂದ್ ಆಯ್ಕೆ
ಇಸ್ಲಾಮಾಬಾದ್, ಆ. 17: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಅಧ್ಯಕ್ಷರಾಗಿ ಸುಲ್ತಾನ್ ಮಹ್ಮೂದ್ ರನ್ನು ಅಲ್ಲಿನ ಶಾಸನ ಸಭೆಯು ಮಂಗಳವಾರ ಆಯ್ಕೆ ಮಾಡಿದೆ. ಪಾಕಿಸ್ತಾನದ ಆಡಳಿತಾರೂಢ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಪಕ್ಷವು ಜುಲೈ 25ರಂದು ನಡೆದ ಚುನಾವಣೆಯಲ್ಲಿ ಜಯ ಗಳಿಸಿದೆ. ಅದು ಸುಲ್ತಾನ್ ಮಹ್ಮೂದ್ಗೆ ಬೆಂಬಲ ನೀಡಿದೆ.
ಅವರು 34 ಮತಗಳನ್ನು ಗಳಿಸಿದರೆ, ಪ್ರತಿಪಕ್ಷ ಅಭ್ಯರ್ಥಿ ಮಿಯಾಂ ಅಬ್ದುಲ್ ವಹೀದ್ 16 ಮತಗಳನ್ನು ಪಡೆದರು.
ಅವರು ಸರ್ದಾರ್ ಮಸೂದ್ ಖಾನ್ ರ ಸ್ಥಾನದಲ್ಲಿ ಅಧಿಕಾರಕ್ಕೆ ಬರುತ್ತಾರೆ. ಖಾನ್ ರ ಅಧಿಕಾರಾವಧಿ ಆಗಸ್ಟ್ 24ರಂದು ಕೊನೆಗೊಳ್ಳುತ್ತದೆ.
Next Story





