ಬಾಲಕಿಗೆ ಕ್ಯಾನ್ಸರ್: ನೆರವಿಗೆ ಕೋರಿಕೆ

ಬೆಂಗಳೂರು, ಆ.17: ಹೊಸಪೇಟೆ ನಗರದ ಅಮರಾವತಿ ಬಡಾವಣೆಯ ಏಳು ವರ್ಷದ ಬಾಲಕಿ ಮೂಳೆ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ದುಬಾರಿ ಔಷಧೋಪಚಾರಕ್ಕೆ ಬಾಲಕಿಯ ಕುಟುಂಬ ನೆರವು ಯಾಚಿಸಿದೆ.
ಅಮರಾವತಿಯ ನಿವಾಸಿ ಎಸ್.ಸಿ.ಮಂಜುನಾಥ್ ಅವರ ಪುತ್ರಿ ಎಂ.ಸಿ.ದೀಕ್ಷಿತಾ(7) ಮೂಳೆ ಕ್ಯಾನ್ಸರ್ ಗೆ ಒಳಗಾಗಿ ಸದ್ಯ ಬೆಂಗಳೂರಿನ ಎಚ್.ಸಿ.ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ದಾನಿಗಳ ಗಮನಕ್ಕೆ: ಮಂಜುನಾಥ್ ಅವರ ಭಾರತೀಯ ಸ್ಟೇಟ್ ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ: 32636408023, ಐಎಫ್‍ಎಸ್‍ಸಿ ಕೋಡ್: ಎಸ್‍ಬಿಐಎನ್ 0021449. ಫೋನ್ ಪೇ-ಗೂಗಲ್ ಪೇ ಮೂಲಕ 9731444806 ಹಾಗೂ 8904595149 ಈ ನಂಬರ್ ಗೆ ಹಣ ಕಳುಹಿಸಬಹುದು.
Next Story





