ವಿಶ್ವ ಜೂನಿಯರ್ ಕುಸ್ತಿ ಚಾಂಪಿಯನ್ಶಿಪ್: ಬೆಳ್ಳಿ ಗೆದ್ದ ಭಾರತದ ರವೀಂದರ್
photo: twitter
ಮಾಸ್ಕೊ:ಭಾರತದ ಕುಸ್ತಿಪಟುಗಳು ರಷ್ಯಾದ ಉಫಾದಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಬುಧವಾರ ಒಟ್ಟು ನಾಲ್ಕು ಪದಕಗಳನ್ನು ಗೆದ್ದುಕೊಂಡಿದ್ದಾರೆ. ಪುರುಷರ ಫ್ರೀಸ್ಟೈಲ್ 61 ಕೆಜಿ ವಿಭಾಗದಲ್ಲಿ ರವೀಂದರ್ ಬೆಳ್ಳಿ ಪದಕ ಗೆದ್ದರೆ, ಯಶ್, ಪೃಥ್ವಿರಾಜ್ ಪಾಟೀಲ್ ಹಾಗೂ ಅನಿರುದ್ಧ ಕುಮಾರ್ ಕ್ರಮವಾಗಿ 74 ಕೆಜಿ, 92 ಕೆಜಿ ಹಾಗೂ 125 ಕೆಜಿ ವಿಭಾಗಗಳಲ್ಲಿ ಕಂಚಿನ ಪದಕ ಪಡೆದರು.
ಇದಕ್ಕೂ ಮುನ್ನ ಗೌರವ್ ಬಲಿಯಾನ್ (79 ಕೆಜಿ) ಹಾಗೂ ದೀಪಕ್ (97 ಕೆಜಿ) ಕೂಡ ಪುರುಷರ ವಿಭಾಗದಲ್ಲಿ ಕಂಚಿನ ಪದಕಗಳನ್ನು ಪಡೆದುಕೊಂಡಿದ್ದರು. ಮಹಿಳಾ ವಿಭಾಗದಲ್ಲಿ ಭಾರತದ ಬಿಪಾಶಾ, 76 ಕೆಜಿ ಫೈನಲ್ ತಲುಪಿದ್ದಾರೆ. ಫೈನಲ್ ಗುರುವಾರ ನಡೆಯಲಿದೆ.
ಸಿಮ್ರಾನ್ (50 ಕೆಜಿ), ಸಿತೋ (55 ಕೆಜಿ), ಕುಸುಮ್ (59 ಕೆಜಿ) ಹಾಗೂ ಅರ್ಜು (68 ಕೆಜಿ) ಕೂಡ ಗುರುವಾರ ಮಹಿಳಾ ವಿಭಾಗದಲ್ಲಿ ಕಂಚಿನ ಪದಕ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ.
Next Story