ದ.ಕ. ಜಿಲ್ಲೆ: ಕೋವಿಡ್ಗೆ 7 ಬಲಿ; 326 ಮಂದಿಗೆ ಕೊರೋನ ಪಾಸಿಟಿವ್
![ದ.ಕ. ಜಿಲ್ಲೆ: ಕೋವಿಡ್ಗೆ 7 ಬಲಿ; 326 ಮಂದಿಗೆ ಕೊರೋನ ಪಾಸಿಟಿವ್ ದ.ಕ. ಜಿಲ್ಲೆ: ಕೋವಿಡ್ಗೆ 7 ಬಲಿ; 326 ಮಂದಿಗೆ ಕೊರೋನ ಪಾಸಿಟಿವ್](https://www.varthabharati.in/sites/default/files/images/articles/2021/08/19/303324-1629389613.jpg)
ಮಂಗಳೂರು, ಆ.19: ದ.ಕ.ಜಿಲ್ಲೆಯಲ್ಲಿ ಗುರುವಾರ ಕೋವಿಡ್ಗೆ 7 ಮಂದಿ ಬಲಿಯಾಗಿದ್ದರೆ, 326 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.3.05 ದಾಖಲಾಗಿದೆ.
ಜಿಲ್ಲೆಯಲ್ಲಿ ಈವರೆಗೆ ಕೋವಿಡ್ಗೆ ಬಲಿಯಾದವರ ಸಂಖ್ಯೆ 1,521ಕ್ಕೇರಿದ್ದರೆ, ಕೊರೋನ ಸೋಂಕಿಗೊಳಗಾದವರ ಸಂಖ್ಯೆ 1,07,010ಕ್ಕೇರಿದೆ. ಅಲ್ಲದೆ 385 ಮಂದಿ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಅದರಂತೆ ಈವರೆಗೆ ಗುಣಮುಖರಾ ದವರ ಸಂಖ್ಯೆ 1,02,188ಕ್ಕೇರಿದೆ. ಸದ್ಯ ಜಿಲ್ಲೆಯಲ್ಲಿ 3,301 ಸಕ್ರಿಯ ಪ್ರಕರಣವಿದೆ. ಜಿಲ್ಲೆಯಲ್ಲಿ ಈವರೆಗೆ 14,29,141ಮಂದಿಯ ಗಂಟಲಿನ ದ್ರವ ಪರೀಕ್ಷೆ ಮಾಡಲಾಗಿದೆ. ಆ ಪೈಕಿ 13,22,131ಮಂದಿಯ ವರದಿ ನೆಗೆಟಿವ್ ಬಂದಿದೆ.
ದಂಡ ವಸೂಲಿ: ಈವರೆಗೆ ಮಾಸ್ಕ್ ನಿಯಮ ಉಲ್ಲಂಘಿಸಿದ 85,105 ಮಂದಿಯಿಂದ 1,03,59,120 ರೂ. ದಂಡವನ್ನು ವಸೂಲು ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story