ಹಳೆಯಂಗಡಿಯಲ್ಲಿ ಯಶಸ್ವಿ ರಕ್ತದಾನ ಶಿಬಿರ

ಹಳೆಯಂಗಡಿ: 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಪಾಪ್ಯುಲರ್ ಬ್ಲಡ್ ಡೋನರ್ಸ್ ಫೋರಂ ಹಳೆಯಂಗಡಿ ಹಾಗು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇದರ ಸಹಬಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ಬೊಳ್ಳೂರಿನ ರಿಲಯನ್ಸ್ ಭವನದಲ್ಲಿ ನಡೆಯಿತು.
ಪಾಪ್ಯುಲರ್ ಬ್ಲಡ್ ಡೋನರ್ಸ್ ಫೋರಂ ಹಳೆಯಂಗಡಿ ವಲಯದ ಅಧ್ಯಕ್ಷ ಜಮಾಲ್ ಕದಿಕೆ ಇವರ ಅಧ್ಯಕ್ಷತೆಯಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿ ಹೈಲ್ಯಾಂಡ್ ಆಸ್ಪತ್ರೆಯ ಖ್ಯಾತ ವೈದ ಡಾ. ಹಸನ್ ಮುಬಾರಕ್ ಬೊಳ್ಳೂರು ಇವರು "ರಕ್ತದಾನ ಶ್ರೇಷ್ಠ ದಾನ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವುದರ ಮೂಲಕ ಆದಷ್ಟು ರಕ್ತದ ಕೊರತೆಯನ್ನು ನೀಗಿಸಬಹುದು" ಎಂದು ಅಭಿಪ್ರಾಯಪಟ್ಟರು.
ಉಪಾಧ್ಯಕ್ಷರಾದ ಮುಬಾರಕ್ ಬೊಳ್ಳೂರು' ರಕ್ತದಾನ ಮಾಡುವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿ, ಒಟ್ಟು ನೂರ ಹದಿಮೂರು ಮಂದಿ ದಾನಿಗಳು ರಕ್ತದಾನ ಮಾಡಿ ಕಾರ್ಯಕ್ರಮದಲ್ಲಿ ಸಹಕರಿಸಿದರು. ಈ ಸಂದರ್ಭ ಡಾ. ಹಸನ್ ಮುಬಾರಕ್ ಹಾಗು ಪ್ರಾಥಮಿಕ ಆರೋಗ್ಯ ಕೇಂದ್ರ ಕೆಮ್ರಾಲ್ ನ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಶ್ರೀಮತಿ ಕುಶಲ ರವರಿಗೆ ಕೊರೊನ ಸಂದರ್ಭದಲ್ಲಿ ನೀಡಿದ ನಿಸ್ವಾರ್ಥ ಆರೋಗ್ಯ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಪಾಪ್ಯುಲರ್ ಬ್ಲಡ್ ಡೋನರ್ಸ್ ಫೋರಂ ಹಳೆಯಂಗಡಿ ಇದರ ಗೌರವಾದಕ್ಷರು ಹಾಜಿ ಅಬ್ದುಲ್ ಖಾದರ್, ಪತ್ರಕರ್ತರು ಹಾಗು ರಂಗಕರ್ಮಿ ಪರಮಾನಂದ ಸಾಲ್ಯಾನ್ ಸಸಿಹಿತ್ಲು, ಪಕ್ಷಿಕೆರೆ ಮಸೀದಿ ಅಧ್ಯಕ್ಷರಾದ ಮುಹಮ್ಮದ್ ನೂರಾನಿಯ, ಕದಿಕೆ ಮಸೀದಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಸಾಗ್, ಸಾಮಾಜಿಕ ಸೇವಕಿ ನಂದಾ ಪಾಯಸ್, ಪಿ.ಎಫ್.ಐ. ದ.ಕ ಜಿಲ್ಲಾ ಕಾರ್ಯದರ್ಶಿ ಮೊಯಿದ್ದೀನ್ ಹಳೆಯಂಗಡಿ, ಹಾಗು ಹಳೆಯಂಗಡಿ ವಲಯ ಅಧ್ಯಕ್ಷ ಇಫ್ತಿಕಾರ್ ಸಾಗ್, ರಿಲಯನ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಕಬೀರ್ ಇಂದಿರಾನಗರ ಉಪಸ್ಥಿತರಿದ್ದರು.
ಬೊಳ್ಳೂರ್ ಮಸೀದಿ ಖತೀಬ್ ಅಲ್ ಹಾಜ್ ಮೊಹಮ್ಮದ್ ಅಝ್ ಹರ್ ಫೈಝಿ ದುವಾ: ಆಶೀರ್ವಚನ ನೀಡಿದರು. ಪಾಪ್ಯುಲರ್ ಬ್ಲಡ್ ಡೋನರ್ಸ್ ಫೋರಂ ನ ಪ್ರಧಾನ ಕಾರ್ಯದರ್ಶಿ ಯಾಸೀನ್ ಸಂತಕಟ್ಟೆ ಸ್ವಾಗತಿಸಿ ಆರೀಸ್ ನವರಂಗ್ ವಂದಿಸಿದರು.







.jpeg)
.jpeg)

.jpeg)

.jpeg)




