ಕಾರ್ಕಳ ಎಪಿಎಂಸಿ ಅಧ್ಯಕ್ಷರಾಗಿ ರತ್ನಾಕರ್ ಅಮೀನ್

ಕಾರ್ಕಳ : ಕಾರ್ಕಳ ಎಪಿಎಂಸಿ ಅಧ್ಯಕ್ಷರಾಗಿ ಮರ್ಣೆ ಗ್ರಾಮದ ರತ್ನಾಕರ್ ಅಮೀನ್ ಅವರು ಆಯ್ಕೆಯಾಗಿರುತ್ತಾರೆ. ಆ. 19ರಂದು ಕಾರ್ಕಳ ಎಪಿಎಂಸಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಭಾರ ನೆಲೆಯಲ್ಲಿ ಅಧ್ಯಕ್ಷರಾಗಿದ್ದ ರತ್ನಾಕರ್ ಅವರು ಅವಿರೋಧವಾಗಿವಾಗಿ ಆಯ್ಕೆಯಾಗಿದ್ದರು.
ತಹಶೀಲ್ದಾರ್ ಪ್ರಕಾಶ್ ಮರಬಳ್ಳಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಎಪಿಎಂಸಿ ಕಾರ್ಯದರ್ಶಿ ಗೋಪಾಲ ಟಿ. ಕಾಕನೂರು, ಸಹಾಯಕ ಕಾರ್ಯದರ್ಶಿ ಎ. ಬಾಲಚಂದ್ರ, ಎಪಿಎಂಸಿ ನಿರ್ದೇಶಕರಾಗಿರುವ ದಿನೇಶ್ ಪೈ, ಪ್ರಕಾಶ್ ಬಲಿಪರಪಾಡಿ, ಮುಟ್ಲುಪಾಡಿ ಸತೀಶ್ ಶೆಟ್ಟಿ, ಸಂಜೀವ ನಾಯ್ಕ್, ಜಯವರ್ಮ ಜೈನ್, ಲಿಂಗಪ್ಪ, ವಸಂತಿ ಮೂಲ್ಯ, ದೇವಾನಂದ ಶೆಟ್ಟಿ, ಜ್ಯೋತಿ ರಮೇಶ್, ಜಯರಾಮ ಆಚಾರ್ಯ ಉಪಸ್ಥಿತರಿದ್ದರು.
ಆರ್‌ಎಸ್‌ಎಸ್‌ನ ಕಾರ್ಯಕರ್ತರಾಗಿ, ಭಜರಂಗದಳ ತಾಲೂಕು ಸಂಚಾಲಕ, ಜಿಲ್ಲಾ ಸಹ ಸಂಚಾಲಕರಾಗಿ, ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಸಹ ಕಾರ್ಯದರ್ಶಿಯಾಗಿ ಜಿಲ್ಲಾ ಕಾರ್ಯದರ್ಶಿಯಾಗಿ, ಮರ್ಣೆ ಗ್ರಾ.ಪಂ. ಸದಸ್ಯರಾಗಿ, ಹಿಂದೂ ಜಾಗರಣ ವೇದಿಕೆ ಮುಖಂಡರಾಗಿ, ಹಿಂದೂ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾಗಿ, ಅಜೆಕಾರು ಸ್ಥಾನಿಯ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಮರ್ಣೆ ಪಂಚಾಯತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದ ಇವರು ದ್ವಿತೀಯ ಅವಧಿಗೆ ಎಪಿಎಂಸಿ ಉಪಾಧ್ಯಕ್ಷರಾಗಿದ್ದರು.







