ಗ್ರಾಮಾಭಿವೃದ್ಧಿ ಯೋಜನೆ ರಾಜ್ಯವ್ಯಾಪಿ ವಿಸ್ತರಿಸಿಕೊಂಡಿದೆ : ವಸಂತ ಸಾಲಿಯಾನ್

ಕಾರ್ಕಳ ಆ.19; ತಂತ್ರಜ್ಞಾನದ ಬಳಕೆಯಿಂದ ಗ್ರಾಮಾಭಿವೃದ್ಧಿ ಯೋಜನೆಯ ಸೇವೆಗಳಿಗೂ ವೇಗ ಸಿಕ್ಕಿದೆ. ಗ್ರಾಮಾಭಿವೃದ್ಧಿ ಯೋಜನೆ ರಾಜ್ಯವ್ಯಾಪಿ ವಿಸ್ತರಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಯೋಜನೆ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸು ವ್ಯವಸ್ಥೆಯನ್ನು ತಾಲೂಕು ಮಟ್ಟದಲ್ಲಿ ಆರಂಭಿಸಲಾಗುತ್ತಿದೆ ಎಂದು ಕರಾವಳಿ ಪ್ರಾದೇಶಿಕ ನಿರ್ದೆಶಕ ವಸಂತ ಸಾಲಿಯಾನ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜೆ.ಸಿ ಟ್ರಸ್ಟ್ ಕಾರ್ಕಳ- ಮೂಡಬಿದ್ರೆ ತಾಲೂಕು ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕೇಂದ್ರ ಸಮಿತಿ ಕಾರ್ಕಳ ಮೂಡಬಿದ್ರೆ ತಾಲೂಕು ಇದರ ಸಹಯೋಗದಲ್ಲಿ ಕಾರ್ಜಳ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ಕೇಂದ್ರ ಸಮಿತಿ ಒಕ್ಕೂಟದ ಪದಗ್ರಹಣ ಹಾಗೂ ಸ್ವಸಹಾಯ ಸಂಘಗಳ ಲಾಭಾಂಶ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿರಿಯ ನ್ಯಾಯವಾಧಿ ಎಂ.ಕೆ ವಿಜಯಕುಮಾರ್ ಉದ್ಘಾಟಿಸಿದರು. ಪುರಸಭೆ ಅಧ್ಯಕ್ಷೆ ಸುಮಾಕೇಶವ್ ಅಧ್ಯಕ್ಷತೆ ವಹಿಸಿದ್ದರು.
ಅಖಿಲ ಜನಜಾಗ್ರತಿ ವೇದಿಕೆ ಸ್ಥಾಪಕಾಧ್ಯಕ್ಷ ಅಂಡಾರು ಮಹಾವೀರ ಹೆಗ್ಡೆ, ಶ್ರೀ ಕ್ಷೇತ್ರ ಧ.ಗ್ರಾಮಾಯೋಜನೆ ಬಿ.ಸಿ ಟ್ರಸ್ಟ್ ನ ಹಿರಿಯ ನಿರ್ದೆಶಕ ಗಣೇಶ್ ಬಿ, ಪ್ರಗತಿಪರ ಕ್ರಷಿ ಆನಡ್ಕ ದಿನೇಶ್ ಕುಮಾರ್, ನಿವ್ರತ್ತ ಬ್ಯಾಂಕ್ ಅಧಿಕಾರಿ ಮೋಹನ ಪಡಿವಾಳ, ಕೇಂದ್ರ ಸಮಿತಿ ನಿಕಟಪೂರ್ವ ಅಧ್ಯಕ್ಷ ಜಯಕುಮಾರ್ ಜೈನ್,ಕಾರ್ಕಳ ಕೇಂದ್ರ ಸಮಿತಿ ನೂತ ಅಧ್ಯಕ್ಷ ಪ್ರವೀಣ್ ಹೆಗ್ಡೆ, ಮೂಡಬಿದ್ರೆ ತಾ.ಕೇಂದ್ರ ಸಮಿತಿ ನೂತನ ಅಧ್ಯಕ್ಷ ಸಂದೀಪ್ ಪೂಜಾರಿ ವೇದಿಕೆಯಲ್ಲಿದ್ದರು. ಯೋಜನೆಯ ಮೇಲ್ವಿಚಾರಕರು ಸದಸ್ಯರು ಉಪಸ್ಥಿತರಿದ್ದರು.







